ಭಾನುವಾರ, ಮೇ 22, 2022
28 °C
ನಮ್ಮ ಕುಡ್ಲ ಟಾಕೀಸ್ ಲಾಂಭನ ಬಿಡುಗಡೆ

ಮನೆಯಲ್ಲಿಯೇ ತುಳು ಸಿನಿಮಾ ವೀಕ್ಷಣೆಗೆ ನಮ್ಮ ಕುಡ್ಲ ಟಾಕೀಸ್ ಕೇಬಲ್ ಚಾನಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಪ್ರದರ್ಶನದ ಸಮಸ್ಯೆಯಿಂದ ಬಳಲುತ್ತಿರುವ ತುಳು ಸಿನಿಮಾಗಳಿಗೆ ಹೊಸ ‘ತೆರೆ’ಯ ಅವಕಾಶ ಕಲ್ಪಿಸಿರುವ ‘ನಮ್ಮ ಕುಡ್ಲ ಟಾಕೀಸ್’ನ ಲಾಂಛನ ಬಿಡುಗಡೆಯು ಫೆ.18ರಂದು ಮಧ್ಯಾಹ್ನ 3.30ಕ್ಕೆ ನಗರದ ಓಷಿಯನ್‌ ಪರ್ಲ್‌ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.

ತುಳು ಸಿನಿಮಾ ರಂಗ ‘ಕೋಸ್ಟಲ್‌ ವುಡ್’ ಸುವರ್ಣ ಮಹೋತ್ಸವ ಪೂರೈಸುತ್ತಿರುವ (1971 ಫೆಬ್ರುವರಿ 19) ಸಂದರ್ಭದಲ್ಲಿ ಮಲ್ನಾಡ್ ಇನ್ಫೋಟೆಕ್ ಮತ್ತು ವಿ4 ಕೇಬಲ್‌ ಜಾಲದಲ್ಲಿ ಈ ಚಾನಲ್‌ ಬರಲಿದೆ.

‘ಈ ಕೇಬಲ್‌ ಚಾನಲ್‌ನಲ್ಲಿ ಪ್ರತಿ ತಿಂಗಳು ಒಂದು ಹೊಸ ಸಿನಿಮಾವನ್ನು ತೋರಿಸಲಾಗುವುದು. ತಿಂಗಳ ಪ್ರತಿ ಭಾನುವಾರ ಮೂರು ಪ್ರದರ್ಶನ ಇರಲಿದೆ’ ಎಂದು ಮಲ್ನಾಡ್ ಇನ್ಫೋಟೆಕ್ ಸಿಇಒ ಹರೀಶ್ ಬಿ. ಕರ್ಕೇರ ಹೇಳಿದರು.

‘ಪೈರಸಿ ನಿಯಂತ್ರಣಕ್ಕೆ ತಾಂತ್ರಿಕ ಮತ್ತು ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದ್ದೇವೆ. ಯಾರೇ ರೆಕಾರ್ಡಿಂಗ್ ಮಾಡಿದರೂ, ದಾಖಲಾಗುತ್ತದೆ. ಅವರ ವಿರುದ್ಧ ದೂರು ದಾಖಲಿಸಲಾಗುವುದು. ಜೈಲು ಶಿಕ್ಷೆಯ ಜೊತೆ ಸಿನಿಮಾ ನಿರ್ಮಾಣ ಸುಮಾರು ಅರ್ಧ ಬಜೆಟ್‌ ಅನ್ನು ದಂಡವಾಗಿ ‍ಪಾವತಿಸಬೇಕಾಗುತ್ತದೆ’ಎಂದು ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಹೇಳಿದರು.

‘ತುಳು ಸಿನಿಮಾ ರಂಗಕ್ಕೆ ಹೊಸ ವೇದಿಕೆಯಾಗಿದ್ದು, ಆ ನಿಟ್ಟಿನಲ್ಲೇ ಸಿನಿಮಾ ನಿರ್ಮಾಣದ ಪ್ರಯತ್ನ ಸಾಗಲಿದೆ. ಸಿನಿಮಾ ಗರಿಷ್ಠ ವೀಕ್ಷಕರಿಗೆ ತಲುಪಲು ಹಾಗೂ ನಿರ್ಮಾಣದ ನಿರಂತರತೆಗೆ ಉತ್ತೇಜನಕಾರಿಯಾಗಲಿದೆ’ ಎಂದು ನಟ ಅರ್ಜುನ್ ಕಾಪಿಕಾಡ್ ಹೇಳಿದರು.

‘ಉಳಿದ ದಿನಗಳಲ್ಲಿ ಇತರ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ಕಾಣಲಿದೆ’ ನಮ್ಮ ಕುಡ್ಲ ಟಾಕೀಸ್ ಸಿಒಒ ಕದ್ರಿ ನವನೀತ ಶೆಟ್ಟಿ ಹೇಳಿದರು.

ನಮ್ಮ ಕುಡ್ಲ ಟಾಕೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಜಗನ್ನಾಥ ಶೆಟ್ಟಿ ಬಾಳ, ವಿ4 ರಣದೀಪ್ ಕಾಂಚನ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು