ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ರೋಡ್‌ ಶೋಗೆ ಸೇರಿರುವ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು

Published 14 ಏಪ್ರಿಲ್ 2024, 14:07 IST
Last Updated 14 ಏಪ್ರಿಲ್ 2024, 14:07 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್‌ ಚೌಟ ಪರ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ನಡೆಸಲಿದ್ದು, ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ.

ಇಲ್ಲಿಯ ನಾರಾಯಣಗುರು ವೃತ್ತದಿಂದ ಆರಂಭಗೊಳ್ಳಲಿರುವ ರೋಡ್‌ಶೋ, ಸುಮಾರು ಎರಡು ಕಿ.ಮೀ. ಕ್ರಮಿಸಿ ಮಂಜೇಶ್ವರ ಗೋವಿಂದ ಪೈ ವೃತ್ತದಲ್ಲಿ ಕೊನೆಗೊಳ್ಳಲಿದೆ. ರೋಡ್‌ ಶೋ ಮಾರ್ಗದಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ವೇದಿಕೆ ನಿರ್ಮಿಸಲಾಗಿದ್ದು, ಲೇಡಿಹಿಲ್ ನಲ್ಲಿ ಭರತನಾಟ್ಯ, ಲಾಲ್ ಬಾಗ್ ನಲ್ಲಿ ಹುಲಿವೇಷ ಪ್ರದರ್ಶನ, ಬಳ್ಳಾಲ್ ಬಾಗ್ ನಲ್ಲಿ ಕುಣಿತಭಜನೆ, ಟಿಎಂಎಪೈ ಸಭಾಂಗಣದ ಮುಂಭಾಗದಕ್ಕು ಸಾಂಸ್ಕೃತಿಕ ವೈಭವ, ಓಷಿಯನ್ ಪರ್ಲ್ ಹೋಟೆಲ್‌ ಬಳಿ ಯಕ್ಷಗಾನ ಬಯಲಾಟದ ಮಹಿಷವಧೆ ಪ್ರಸಂಗದ ಪ್ರದರ್ಶನ ನಡೆಯುತ್ತಿದೆ. ಜನರಿಗೆ ಮನರಂಜನೆ ನೀಡುವುದು ಹಾಗೂ ಮೋದಿ ಅವರಿಗೆ ಕರಾವಳಿ ಸಾಂಸ್ಕೃತಿಕ ವೈಭವ ತೋರಿಸುವುದು ಇದರ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT