ಶುಕ್ರವಾರ, ಮಾರ್ಚ್ 31, 2023
22 °C

ಬ್ಯಾಸ್ಕೆಟ್‌ಬಾಲ್‌: ಕೆಎಂಸಿ ಸವಾಲು ಮೀರಿನಿಂತ ನಿಟ್ಟೆ ಪುರುಷರ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದ್ವಿತೀಯಾರ್ಧದಲ್ಲಿ ಜಿದ್ದಾಜಿದ್ದಿಯ ಹಣಾಹಣಿಗೆ ಸಾಕ್ಷಿಯಾದ ಪಂದ್ಯದಲ್ಲಿ ನಿಟ್ಟೆ ಕಾಲೇಜು ಪುರುಷರ ತಂಡದವರು ರೋಚಕ ಜಯ ಸಾಧಿಸಿದರು. ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್ ಹಾಗೂ ನಿಟ್ಟೆ ವಿಶ್ವವಿದ್ಯಾಲಯ ಆಶ್ರಯದಲ್ಲಿ ನಡೆಯುತ್ತಿರುವ ನಿಟ್ಟೆ ಯುನಿವರ್ಸಿಟಿ ಕಪ್ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯದಲ್ಲಿ ನಿಟ್ಟೆ ತಂಡ 50–43ರಲ್ಲಿ ಮಂಗಳೂರಿನ ಕೆಎಂಸಿ ತಂಡವನ್ನು ಮಣಿಸಿತು.

ಉಭಯ ತಂಡಗಳು ಆರಂಭದಿಂದಲೇ ಭಾರಿ ಪೈಪೋಟಿಗೆ ಇಳಿದವು. ಮೊದಲಾರ್ಧದಲ್ಲಿ ನಿಟ್ಟೆ ತಂಡ ಕೇವಲ 4 ಪಾಯಿಂಟ್‌ಗಳ (18–14) ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲೂ ತಂಡಗಳು ಪಟ್ಟು ಬಿಡದೆ ಕಾದಾಡಿದವು. ನಿಟ್ಟೆ ಪರವಾಗಿ ಮೋಹಿತ್ 19 ಪಾಯಿಂಟ್ ಗಳಿಸಿದರೆ ಕೆಎಂಸಿಯ ಮುಕುಲ್ 14 ಪಾಯಿಂಟ್ ಕಲೆ ಹಾಕಿದರು. 

ಸೇಂಟ್ ಅಲೋಷಿಯಸ್ ಪದವಿ ಕಾಲೇಜು ಮತ್ತು ಸೇಂಟ್ ಅಲೋಷಿಯಸ್ ಪಿಯು (ಬಿ) ನಡುವಿನ ಹಣಾಹಣಿಯಲ್ಲಿ ಪದವಿ ಕಾಲೇಜು 59–17ರಲ್ಲಿ ಜಯ ಗಳಿಸಿತು. ವಿಜಯಿ ತಂಡದ ಸಾಹಿಲ್ 18 ಪಾಯಿಂಟ್ ಗಳಿಸಿದರೆ, ಪಿಯು ಕಾಲೇಜಿನ ಸ್ಮಯನ್ 8 ಪಾಯಿಂಟ್ ಗಳಿಸಿದರು. ಆ್ಯಶ್ಲಿನ್ ಗಳಿಸಿದ 10 ಪಾಯಿಂಟ್‌ಗಳ ಬಲದಿಂದ ಸೇಂಟ್ ಅಲೋಷಿಯಸ್ ಪಿಯು ಕಾಲೇಜು ತಂಡ ಮಹಿಳಾ ವಿಭಾಗದಲ್ಲಿ ಸೇಂಟ್ ಅಲೋಷಿಯಸ್ ಪದವಿ ಕಾಲೇಜು ತಂಡವನ್ನು 24–18ರಲ್ಲಿ ಸೋಲಿಸಿತು.

ಬಾಲಕಿಯರ ವಿಭಾಗದಲ್ಲಿ ನಿಟ್ಟೆ ಶಾಲಾ ತಂಡ 34–2ರಲ್ಲಿ ಸೇಂಟ್ ಆ್ಯಗ್ನೆಸ್‌ ತಂಡದ ವಿರುದ್ಧ ಜಯ ಗಳಿಸಿತು. ನಿಧಿ 12 ಪಾಯಿಂಟ್ ಗಳಿಸಿದರು. ಸಿಂಚನಾ (12 ಪಾಯಿಂಟ್‌) ಅವರ ಅಮೋಘ ಆಟದ ನೆರವಿನಿಂದ ನಿಟ್ಟೆ ತಂಡ ಹೈಸ್ಕೂಲ್ ಬಾಲಕಿಯರ ವಿಭಾಗದಲ್ಲಿ ಮೌಂಟ್ ಕಾರ್ಮೆಲ್ ವಿರುದ್ಧ 13–2ರಲ್ಲಿ ಜಯ ಗಳಿಸಿತು. ಮತ್ತೊಂದು ಪಂದ್ಯದಲ್ಲಿ ಅಲೋಷಿಯಸ್ ಗೊನ್ಜಾಗ ತಂಡ 15–8ರಲ್ಲಿ ಮೌಂಟ್ ಕಾರ್ಮೆಲ್ ವಿರುದ್ಧ ಗೆದ್ದಿತು.

ಸ್ಯಾಮುವೆಲ್ (15 ಪಾಯಿಂಟ್) ಅವರ ಉತ್ತಮ ಆಟದಿಂದಾಗಿ ಪ್ರಾಥಮಿಕ ಶಾಲಾ ಬಾಲಕರ ಪಂದ್ಯದಲ್ಲಿ ಮೌಂಟ್ ಕಾರ್ಮೆಲ್ 27–10ರಲ್ಲಿ ನಿಟ್ಟೆ ತಂಡದ ವಿರುದ್ಧ ಗೆಲುವು ದಾಖಲಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು