ಬೆಳ್ತಂಗಡಿ: ಕೇಂದ್ರ ಸರ್ಕಾರದ ಉಕ್ಕು ಸಚಿವಾಲಯದಲ್ಲಿರುವ ಸಾರ್ವಜನಿಕ ಉದ್ದಿಮೆಗಳಾದ ಕೆಐಒಸಿಎಲ್ ಅನ್ನು ಎನ್‌ಎಂಡಿಸಿ ಸಂಸ್ಥೆಯೊಂದಿಗೆ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಒತ್ತಾಯಿಸುವಂತೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ನೇತೃತ್ವದ ನಿಯೋಗ ರಾಜ್ಯ ಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಸಲ್ಲಿಸಿತು.
ಮನವಿಯನ್ನು ಸ್ವೀಕರಿಸಿ ವೀರೇಂದ್ರ ಹೆಗ್ಗಡೆ, ಪ್ರಧಾನಮಂತ್ರಿ ಹಾಗೂ ಸಚಿವ ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಜಯರಾಜ್ ಸಾಲಿಯನ್, ಅನಿಲ್ ಕುಮಾರ್ ಯು., ಚಂದ್ರೇಗೌಡ, ಭಗವಾನ್‌ದಾಸ್ ಬಿ.ಎನ್., ಕೆಂಚೇಗೌಡ, ಉದಯ ಕುಮಾರ್ ಬಿ.ಸಿ., ಶ್ರೀಧರ್ ಉಳ್ಳಾಲ್, ಪಾಲಯ್ಯ, ಶ್ರೀಮಂದ್ರ ಭಾಗವಹಿಸಿದ್ದರು.