ಮಂಗಳೂರಿನ ನೆಹರೂ ಮೈದಾನದಲ್ಲಿ ಹಿಂದೂ ಯುವಸೇನೆ ವತಿಯಿಂದ ಹಮ್ಮಿಕೊಂಡಿದ್ದ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ
ಪ್ರಜಾವಾಣಿ ಚಿತ್ರ
ನಗರದಲ್ಲಿ ಪ್ರತಿ ಬೀದಿಯಲ್ಲೂ ಆಸ್ಪತ್ರೆಗಳಿವೆ. ಶಬ್ದ ಮಾಲಿನ್ಯದ ಬಗ್ಗೆ ರೋಗಿಗಳಿಂದ ಹಿರಿಯ ನಾಗರಿಕರಿಂದ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಂದ ದೂರು ಬಂದಾಗ ಕ್ರಮ ಕೈಗೊಳ್ಳುವುದು ಅನಿವಾರ್ಯ
ಸುಧೀರ್ ಕುಮಾರ್ ರೆಡ್ಡಿ ಮಂಗಳೂರು ಪೊಲೀಸ್ ಕಮಿಷನರ್
ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿ ನಿಯಮಗಳು ಎಲ್ಲ ಧರ್ಮಗಳ ಆಚರಣೆಗಳಿಗೂ ಅನ್ವಯವಾಗುತ್ತವೆ. ಯಾರೇ ನಿಯಮ ಉಲ್ಲಂಘಿಸಿದರೂ ಅವರ ಧರ್ಮ ನೋಡದೇ ಮುಲಾಜಿಲ್ಲದೇ ಕ್ರಮ ವಹಿಸಲಾಗುತ್ತಿದೆ.
ಡಾ.ಅರುಣ್ ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
‘ನೆಲದ ಕಲಾ ಪ್ರಕಾರಗಳಿಗೆ ಹೆಚ್ಚಿದ ಬೇಡಿಕೆ’ ಮೆರವಣಿಗೆಗಳಲ್ಲಿ ಡಿ.ಜೆ. ಹಾವಳಿ ಈಚೆಗೆ ಹಚ್ಚಾಗಿತ್ತು. ಅದರ ಕಿವಿಗಡಚಿಕ್ಕುವ ಧ್ವನಿಯ ಅಬ್ಬರಕ್ಕೆ ನಮ್ಮ ನೆಲದ ಜಾನಪದ ಕಲಾಪ್ರಕಾರಗಳು ಕಳೆಗುಂದುವಂತಾಗಿತ್ತು. ಕೇವಲ ತಾಸೆ ಕೊಳಲು ಡೋಲು ಬಳಸುವ ಕಂಗೀಲು ಕುಣಿತ ಕಣ್ಣಿಗೂ ತಂಪು ಕಿವಿಗೂ ಇಂಪು. ಡಿ.ಜೆ ಹಾವಳಿಯಿಂದ ಕಂಗೀಲುವಿನಂತಹ ಕಲಾಪ್ರಕಾರಗಳನ್ನು ಪ್ರದರ್ಶಿಸುವುದೇ ದುಸ್ತರವಾಗಿತ್ತು. ಡಿ.ಜೆ. ನಿಷೇಧಿಸಿದ್ದರಿಂದ ನಮ್ಮ ಕಲಾ ತಂಡದ ಕಂಗೀಲು ನವಿಲು ಕುಣಿತ ಹುಲಿವೇಷ ಚೆಂಡೆ ಗೊಂಬೆ ಕುಣಿತಗಳಿಗೆ ಈ ವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಬೇಡಿಕೆ ಹೆಚ್ಚಿದೆ.
‘ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿಲ್ಲ’ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಪೊಲೀಸ್ ಠಾಣೆಯ ಅನುಮತಿ ಕಡ್ಡಾಯ ಮಾಡಿರುವುದು ಹಾಗೂ ಡಿ.ಜೆ.ಗೆ ಹಾಗೂ ಕಿವಿಗಡಚಿಕ್ಕುವಂತೆ ಧ್ವನಿ ವರ್ಧಕ ಬಳಸಲು ಅವಕಾಶ ಕಲ್ಪಿಸದೇ ಇರುವುದು ಸ್ವಾಗತಾರ್ಹ ಬೆಳವಣಿಗೆ. ಜಿಲ್ಲೆಯಲ್ಲಿ ಈ ವರ್ಷ 498 ಕಡೆ ಕಡೆ ಸಾರ್ವಜನಿಕ ಗಣೇಶೋತ್ಸವಗಳನ್ನು ನಡೆಸಲಾಗಿದೆ. ಗೊಂದಲಗಳಿಗೆ ಅವಕಾಶ ಇಲ್ಲದೇ ಎಲ್ಲೆಡೆಯೂ ಸಾಂಗವಾಗಿ ಗಣೇಶೋತ್ಸವ ನಡೆದಿದೆ. ಕೆಲವೆಡೆ ರಾತ್ರಿ 10 ಗಂಟೆ ಬಳಿವೂ ಹೆಚ್ಚು ಸದ್ದುಗದ್ದಲವಿಲ್ಲದೇ ಮೆರವಣಿಗೆಗಳು ನಡೆದಿವೆ. ಪೊಲೀಸರು ಎಲ್ಲೂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿಲ್ಲ. ದಸರಾ ಶೋಭಾಯಾತ್ರೆಯೂ ಚೆನ್ನಾಗಿ ನಡೆಯುತ್ತದೆ ಎಂಬ ವಿಶ್ವಾಸ ಇದೆ.
ಮಲ್ಲಿಕಾ ಪ್ರಶಾಂತ್ ಪಕ್ಕಳ ಸದಸ್ಯರು ರಾಜ್ಯ ಧಾರ್ಮಿಕ ಪರಿಷತ್