ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಗರಿಷ್ಠ 'ನೋಟಾ' ಮತ ದೊರೆತಿರುವುದು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ

ಪ್ರತಿಫಲಿಸಿದ ಸೌಜನ್ಯಾ ಪರ ಹೋರಾಟಗಾರರ ನೋಟಾ ಅಭಿಯಾನ
Published 4 ಜೂನ್ 2024, 14:18 IST
Last Updated 4 ಜೂನ್ 2024, 14:18 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನೋಟಾಕ್ಕೆ 23,576 ಮತಗಳು ದೊರೆತಿದ್ದು, ರಾಜ್ಯದಲ್ಲೇ ಇದು ಗರಿಷ್ಠವಾಗಿದೆ. ನೋಟಾಕ್ಕೆ 11,191 ಮತ ದಾಖಲಾಗಿರುವ ಉಡುಪಿ– ಚಿಕ್ಕಮಗಳೂರು ಕ್ಷೇತ್ರ ದ್ವಿತೀಯ ಸ್ಥಾನದಲ್ಲಿದೆ. ಇವೆರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಮತ್ತು ಪ್ರತಿಸ್ಪರ್ಧಿ ಅಭ್ಯರ್ಥಿಯ ನಂತರದ ಸ್ಥಾನ ನೋಟಾಕ್ಕೆ ದೊರೆತಿದೆ.

ಬೆಳ್ತಂಗಡಿ ತಾಲ್ಲೂಕಿನ ಸೌಜನ್ಯಾ ಎಂಬ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡೆಸುವಂತೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಚುನಾವಣೆಗೆ ಒಂದು ತಿಂಗಳು ಪೂರ್ವದಿಂದ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧೆಡೆ ನೋಟಾ ಅಭಿಯಾನದ ಸಭೆಗಳು ನಡೆದಿದ್ದವು.

ಮತದಾನದ ದಿನ ಕಡಬ ತಾಲ್ಲೂಕು ಕೌಕ್ರಾಡಿ ಪಂಚಾಯಿತಿಯ ಇಚ್ಲಂಪಾಡಿ ಮತಗಟ್ಟೆಯ ಹೊರ ಆವರಣದಲ್ಲಿ ರಾಜಕೀಯ ಪಕ್ಷಗಳ ಟೆಂಟ್‌ ಜೊತೆಗೆ ತಲೆಎತ್ತಿದ್ದ ‘ನೋಟಾ ಅಭಿಯಾನ’ದ ಟೆಂಟ್ ಗಮನ ಸೆಳೆದಿತ್ತು.

‘ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ನಡೆದು, ತಾರ್ಕಿಕ ಅಂತ್ಯ ಕಾಣಬೇಕೆಂಬ ಬಹುಜನರ ಅಭಿಪ್ರಾಯದ ಮೇಲೆ ನಡೆಸಿರುವ ನೋಟಾ ಅಭಿಯಾನ ಇಡೀ ರಾಜ್ಯದಲ್ಲಿ ಪ್ರಭಾವ ಬೀರಿದೆ. ಎಲ್ಲ ಕ್ಷೇತ್ರಗಳಲ್ಲೂ ಹಿಂದಿನ ಚುನಾವಣೆಗಿಂತ ಹೆಚ್ಚು ಮತಗಳು ನೋಟಾಕ್ಕೆ ಬಂದಿವೆ. ಅಧಿಕಾರ ಹಿಡಿಯುವ ಸರ್ಕಾರ ಇನ್ನಾದರೂ ಎಚ್ಚೆತ್ತು ಸೌಜನ್ಯಾ ಪ್ರಕರಣದ ಮರು ತನಿಖೆ ನಡೆಸಲು ಮುಂದಾಗಬೇಕು’ ಎಂದು ಮಹೇಶ್ ಶೆಟ್ಟಿ ತಿಮರೋಡಿ ‘ಪ್ರಜಾವಾಣಿ’ಗೆ ಪ್ರತಿ‌ಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT