‘ನನ್ನ ವಾಟ್ಸಾಪ್ ಸಂಖ್ಯೆಗೆ ನ. 4ರಂದು ಸಂದೇಶ ಬಂದಿತ್ತು. ಅದರ ಜೊತೆಗೆ ಆನ್‌ಲೈನ್ ವೆಬ್‌ಸೈಟ್‌ನ ಕೊಂಡಿಯನ್ನು ಕಳುಹಿಸಿದ್ದರು. ಅದನ್ನು ತೆರೆದಾಗ ಟೆಲಿಗ್ರಾಂ ಆ್ಯಪ್‌ನ ಗ್ರೂಪ್‌ಗೆ ನನ್ನನ್ನು ಸೇರಿಸಿದ್ದರು. ನನಗೆ ‘ಸ್ಟಾರ್ ರೇಟಿಂಗ್’ ಎಂಬ ಟಾಸ್ಕ್ ನೀಡಲಾಗಿತ್ತು. ಅದರ ಸಲುವಾಗಿ ಆರಂಭದಲ್ಲಿ ₹ 5 ಸಾವಿರ ಹಣವನ್ನು ಪಾವತಿಸಿದ್ದೆ. ಪ್ರತಿಯಾಗಿ ನನ್ನ ಖಾತೆಗೆ ₹ 6,500 ಜಮೆ ಮಾಡಿದ್ದರು. ನಂತರ ‘ಗ್ರೂಪ್ ಮರ್ಚೆಂಟ್ ಟಾಸ್ಕ್’ ಮಿಷನ್ ಪೂರ್ಣಗೊಳಿಸಲು ಹಣ ಕಟ್ಟುವಂತೆ ಸೂಚಿಸಿದ್ದರು. ಇದಕ್ಕಾಗಿ ನ. 4ರಿಂದ ನ.7ರವರೆಗೆ ಹಂತ-ಹಂತವಾಗಿ ಒಟ್ಟು ₹21.51 ಲಕ್ಷವನ್ನು ಪಾವತಿಸಿದ್ದೆ. ನಂತರ ಹಣವನ್ನು ಮರಳಿಸದೇ ವಂಚಿಸಲಾಗಿದೆ ಎಂದು ವಂಚನೆಗೊಳಗಾದ ವ್ಯಕ್ತಿ ದೂರಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.