ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ದ.ಕ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಯೋಗದಲ್ಲಿ ಯಾಂತ್ರಿಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆ ಇಲ್ಲಿನ ಬೀಜೋತ್ಪಾದನಾ ಕೇಂದ್ರದಲ್ಲಿ ನಡೆಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್ ಮಾತನಾಡಿ, ‘ಯಂತ್ರೋಪಕರಣಗಳ ಬಳಕೆಯಿಂದ ಯುವ ಜನತೆ ಭತ್ತ ಕೃಷಿಯತ್ತ ಆಕರ್ಷಣೆಯಾಗುತ್ತಿದ್ದಾರೆ. ಇಂದು ಭತ್ತ ಕೃಷಿ ಉಳಿಯಲು ಯಂತ್ರೋಪಕರಣವೇ ಮೂಲ ಆಧಾರವಾಗಿದೆ. ರಾಜ್ಯದಾದ್ಯಂತ 1,00,254 ಎಕರೆ ಪ್ರದೇಶಗಳಲ್ಲಿ ಸುಮಾರು 44, 119 ರೈತರಲ್ಲಿ ಯಾಂತ್ರಿಕೃತ ಭತ್ತ ಬೇಸಾಯವನ್ನು ಈವರೆಗೆ ಅನುಷ್ಠಾನಗೊಳಿಸಲಾಗಿದೆ. ರೈತರಿಗೆ ಇದರ ಬಗ್ಗೆ ಪೂರ್ಣವಾದ ಮಾಹಿತಿಯನ್ನು ನೀಡಲು ತರಬೇತಿ, ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಾಗಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರಸ್ತುತ ವರ್ಷ 372 ರೈತರು 758 ಎಕರೆ ಜಮೀನಿನಲ್ಲಿ ಯಾಂತ್ರಿಕೃತ ಭತ್ತ ಬೇಸಾಯ ಕೈಗೊಂಡಿದ್ದಾರೆ. ರಾಜ್ಯದಾದ್ಯಂತ ಕೃಷಿ ಯಂತ್ರಧಾರೆಯ ಮೂಲಕ ರೈತರಿಗೆ ಯಂತ್ರಗಳನ್ನು ಒದಗಿಸಿಕೊಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು’ ಎಂದರು.

ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ‘ಜಿಲ್ಲೆಯಲ್ಲಿ ಯುವಜನತೆಯು ಕೂಡ ಇಂದು ಭತ್ತಕೃಷಿಯನ್ನು ಇರುವಂತಹ ಗದ್ದೆಗಳಲ್ಲಿ ಯಾಂತ್ರಿಕರಣದ ಮೂಲಕವಾಗಿ ಮಾಡುತ್ತಿದ್ದು, ಕೃಷಿ ಇಲಾಖೆಯಿಂದಲೂ ಸಂಪೂರ್ಣವಾದ ಸಹಕಾರವನ್ನು ನೀಡಲಾಗುತ್ತಿದೆ. ರೈತರಿಗೆ ಭತ್ತದ ಬೀಜ ಸಹಿತ ಹೆಚ್ಚಿನ ಸವಲತ್ತುಗಳು ಕೃಷಿ ಇಲಾಖೆಯಿಂದ ನೀಡಲಾಗುತ್ತಿದ್ದು, ರೈತರು ಕೃಷಿ ಇಲಾಖೆಗೆ ಬಂದು ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಬೆಳೆ ಸಮೀಕ್ಷೆಯನ್ನು ಮಾಡದೆ ಇರುವ ರೈತರು ತನ್ನ ಮೊಬೈಲಿನಲ್ಲಿಯೇ ಬೆಳೆ ಸಮೀಕ್ಷೆ ಮಾಡಬಹುದಾಗಿದೆ ಎಂದರು.

ಯಾಂತ್ರೀಕೃತ ಭತ್ತ ಕೃಷಿಕ ಪ್ರಾಂಸಿಸ್ ಮಿರಂದ ತಮ್ಮ ಅನುಭವ ಹಂಚಿಕೊಂಡರು. ಕೃಷಿ ಇಲಾಖೆ ಬೆಳ್ತಂಗಡಿಯ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಎ.ಡಿ., ಕೃಷಿ ಅಧಿಕಾರಿ ಗಣೇಶ್, ಬಿ.ಸಿ.ಟ್ರಸ್ಟ್ ಬೆಳ್ತಂಗಡಿ ತಾಲ್ಲೂಕು ಯೋಜನಾಧಿಕಾರಿ ಯಶೋಧರ್, ಬಿ.ಸಿ.ಟ್ರಸ್ಟ್ ಕೇಂದ್ರ ಕಚೇರಿಯ ಯೋಜನಾಧಿಕಾರಿ ಬಾಲಕೃಷ್ಣ, ಸಿಎಚ್ಎಸ್ಸಿ ಯೋಜನಾಧಿಕಾರಿ ಮೋಹನ್, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ ಆರ್ ಬೆಳ್ತಂಗಡಿ, ತಾಂತ್ರಿಕ ಅಭಿಯಂತರರಾದ ಸುದರ್ಶನ್, ಪ್ರಗತಿಪರ ಯಂತ್ರ ಶ್ರೀ ಕೃಷಿಕ ಪ್ರವೀಣ್ ಮಲೆಬೆಟ್ಟು, ತಾಲ್ಲೂಕು ಕೃಷಿ ಮೇಲ್ವಿಚಾರಕ ರಾಮ್ ಕುಮಾರ್, ಸಿಎಚ್ಎಸ್ಸಿ ಪ್ರಬಂಧಕ ಚೇತನ್, ಕೃಷಿಕ ಲಾರೆನ್ಸ್, ಯತೀಶ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.