ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ | ಅಡಿಕೆ ಬೆಳೆಗಾರರ ಸಂಘಟನೆ ರಚನೆಗೆ ಸಿದ್ಧತೆ: ಜಯಕರ ಶೆಟ್ಟಿ

Published 5 ಜನವರಿ 2024, 5:13 IST
Last Updated 5 ಜನವರಿ 2024, 5:13 IST
ಅಕ್ಷರ ಗಾತ್ರ

ಬಂಟ್ವಾಳ: ‘ಅಡಿಕೆ ಧಾರಣೆ ಏರಿಳಿತದಿಂದಾಗಿ ಜಿಲ್ಲೆಯಲ್ಲಿ ಗುಣಮಟ್ಟದ ಅಡಿಕೆ ಬೆಳೆಯುವ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ರಾಜಕೀಯ ರಹಿತವಾಗಿ ಅಡಿಕೆ ಬೆಳೆಗಾರರ ಸಂಘಟನೆಯೊಂದನ್ನು  ಜಿಲ್ಲಾ ಮಟ್ಟದಲ್ಲಿ ರಚಿಸಲು ಸಿದ್ಧತೆ ನಡೆಯುತ್ತಿದೆ’ ಎಂದು ಇಲ್ಲಿನ ಸಿದ್ಧಕಟ್ಟೆ ಅಡಿಕೆ ವರ್ತಕ, ಪ್ರಗತಿಪರ ಕೃಷಿಕ ಜಯಕರ ಶೆಟ್ಟಿ ಪರನೀರು ಹೇಳಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಂಬಳ ಕೋಣಗಳ ಮಾಲೀಕರು ಬಹುತೇಕ ಅಡಿಕೆ ಬೆಳೆಗಾರರಾಗಿದ್ದು, ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಬಲಿಷ್ಟ ಸಂಘಟನೆ ರೂಪಿಸಲು ಸಾಧ್ಯವಿದೆ. ವಿದೇಶಗಳಿಂದ ಅಡಿಕೆ ಆಮದು ತಡೆದು, ಗರಿಷ್ಠ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆ ಹೊಂದಿರುವ ಬೆಳಗಾವಿ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ ರಾಜ್ಯಗಳೊಂದಿಗೆ ಸಂಘಟನೆ ಕೈ ಜೋಡಿಸಿದಾಗ ಸುಳಿಲ ಒಣ ಅಡಿಕೆಗೆ ಕೆ,ಜಿಗೆ ಸರಾಸರಿ ₹500 ರಿಂದ ₹1 ಸಾವಿರ ತನಕ ದರ ಕಾಯ್ದುಕೊಳ್ಳಲು ಸಾಧ್ಯವಿದೆ. ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿರುವ ಗುಟ್ಕಾ ನಿಷೇಧಕ್ಕೂ ಸಂಘಟನೆ ಪ್ರಯತ್ನಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT