ಶನಿವಾರ, ಜೂಲೈ 11, 2020
27 °C
ಖಾಸಗಿ ಬಸ್ ಸಿಬ್ಬಂದಿಯಿಂದ ಮುನ್ನೆಚ್ಚರಿಕೆ

ಮಂಗಳೂರು | ಕಂಡಕ್ಟರ್‌ಗೂ ಪಿಪಿಇ ಕಿಟ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಲಾಕ್‌ಡೌನ್‌ ನಿಧಾನವಾಗಿ ಸಡಿಲಿಕೆ ಆಗುತ್ತಿದ್ದು, ಜನಜೀವನ ಸಹಜತೆಯತ್ತ ಮರಳುತ್ತಿದೆ. ಈಗಾಗಲೇ ಖಾಸಗಿ ಬಸ್‌ಗಳ ಓಡಾಟ ಆರಂಭವಾಗಿದೆ. ಈ ಮಧ್ಯೆ ಸೋಂಕು ತಗಲದಂತೆ ಅಗತ್ಯ ಮುಂಜಾಗ್ರತೆ ವಹಿಸಿರುವ ಖಾಸಗಿ ಬಸ್‌ಗಳ ನಿರ್ವಾಹಕರು, ಇದೀಗ ಪಿಪಿಇ ಕಿಟ್‌ ಮಾದರಿಯ ರಕ್ಷಾ ಕವಚ ಧರಿಸಲು ಮುಂದಾಗಿದ್ದಾರೆ.

ಸ್ಟೇಟ್ ಬ್ಯಾಂಕ್‌ನಿಂದ ಶಕ್ತಿನಗರಕ್ಕೆ ತೆರಳುವ ರೂಟ್ ನಂಬರ್‌ 6 ಎ ನಗರ ಸಂಚಾರದ ಬಸ್‌ನ ನಿರ್ವಾಹಕರೊಬ್ಬರು ರಕ್ಷಣೆ ಪಡೆಯಲೆಂದು ಪಿಪಿಇ ಕಿಟ್ ಮಾದರಿಯಲ್ಲಿ ರಕ್ಷಣಾ ಕವಚ ಧರಿಸಿ, ನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೈಗವಸು, ಆರೋಗ್ಯ ತಪಾಸಣೆ, ಮಾಸ್ಕ್ ಹಾಕಿ ಕರ್ತವ್ಯ ನಿರ್ವಹಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಚಿಸಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಬಸ್‌ನ ನಿರ್ವಾಹಕರು ರಕ್ಷಣಾ ಕವಚ ಧರಿಸಿ ಕೆಲಸ ಮಾಡುತ್ತಿರುವುದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.


ಪಿಪಿಇ ಕಿಟ್‌ ಮಾದರಿ ರಕ್ಷಣಾ ಕವಚ ಧರಿಸಿರುವ ಖಾಸಗಿ ಬಸ್‌ ನಿರ್ವಾಹಕ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು