ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುರತ್ಕಲ್: ಕಾನ– ತೋಕೂರು ರಸ್ತೆ ಅಭಿವೃದ್ಧಿಗೆ ಒತ್ತಾಯ, ಪ್ರತಿಭಟನೆ

Published 9 ನವೆಂಬರ್ 2023, 14:18 IST
Last Updated 9 ನವೆಂಬರ್ 2023, 14:18 IST
ಅಕ್ಷರ ಗಾತ್ರ

ಸುರತ್ಕಲ್: ಸಂಪೂರ್ಣವಾಗಿ ಹದಗೆಟ್ಟಿರುವ ಕಾನ- ತೋಕೂರು ಎಂಎಸ್‌ಇಝಡ್‌ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ, ರಸ್ತೆ ಗುಂಡಿ ಮುಚ್ಚದೆ ನಿರ್ಲಕ್ಷ್ಯ ಮಾಡುತ್ತಿರುವ ಎಂಆರ್‌ಪಿಎಲ್‌ ಮತ್ತು ಎಂಎಸ್‌ಇಝಡ್‌ ಸಂಸ್ಥೆಗಳು ಬೇಜವಾಬ್ದಾರಿ ವಹಿಸುತ್ತಿವೆ ಎಂದು ಆರೋಪಿಸಿ ಕಾನ- ತೋಕೂರು ಆಟೊರಿಕ್ಷಾ ಚಾಲಕರ ಸಂಘ (ಸಿಐಟಿಯು) ಮತ್ತು ಡಿವೈಎಫ್‌ಐ ಸುರತ್ಕಲ್ ಘಟಕದ ನೇತೃತ್ವದಲ್ಲಿ ಗುರುವಾರ ರಸ್ತೆ ತಡೆ, ಪ್ರತಿಭಟನೆ ನಡೆಯಿತು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್, ಮಂಗಳೂರಿನಲ್ಲಿ ತೈಲಾಗಾರ, ವಿಶೇಷ ಆರ್ಥಿಕ ವಲಯ, ಬಂದರು, ಗ್ರಾಮ ಮತ್ತು ಮಂಗಳೂರು ನಗರ ಅಭಿವೃದ್ಧಿ ಆಗುತ್ತದೆ ಎಂದು ನೆಲ, ಜಲ ಮತ್ತು ಭಾವನಾತ್ಮಕ ಸಂಬಂಧ ತ್ಯಾಗ ಮಾಡಿದ ಜನರಿಗೆ ಕನಿಷ್ಠ ರಸ್ತೆ ನಿರ್ಮಾಣ ಮಾಡಲು ಎಂಆರ್‌ಪಿಎಲ್‌ ಮತ್ತು ಎಸ್‌ಇಝಡ್‌ಗೆ ಆಗಿಲ್ಲ. ಅವುಗಳು ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾನ– ತೋಕೂರು ರಸ್ತೆಯಲ್ಲಿ ಹೊಂಡಮಯವಾಗಿದ್ದು, ಅಪಘಾತ ಉಂಟಾಗುತ್ತಿವೆ. ಹದಿನೈದು ದಿನಗಳಲ್ಲಿ ರಸ್ತೆ ಸಮಸ್ಯೆ ಪರಿಹಾರ ಆಗದಿದ್ದರೆ ಕೈಗಾರಿಕೆಗಳಿಗೆ ಬರುವ ಎಲ್ಲ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದರು.

ಸಿಪಿಎಂ ಸುರತ್ಕಲ್ ಶಾಖಾ ಕಾರ್ಯದರ್ಶಿ ಶ್ರೀನಾಥ್ ಕುಲಾಲ್, ಆಟೊ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಬಷೀರ್, ಡಿವೈಎಫ್ಐ ಸುರತ್ಕಲ್ ಘಟಕ ಅಧ್ಯಕ್ಷ ಬಿಕೆ ಮಕ್ಸೂದ್, ಜಿಲ್ಲಾ ಸಮಿತಿ ಸದಸ್ಯ ಶೈಫರ್ ಆಲಿ ಚೊಕ್ಕಬೆಟ್ಟು, ಸಾದಿಕ್ ಕಿಲ್ಪಾಡಿ, ಇಮ್ತಿಯಾಝ್ ಕುಳಾಯಿ, ಮುನೀಬ್, ಶಮೀರ್, ರಿಕ್ಷಾಚಾಲಕರ ಸಂಘದ ಪ್ರಮುಖರಾದ ಗಣೇಶ್, ಲಕ್ಷ್ಮೀಶ್ ಅಂಚನ್, ಸುಧೀರ್ ಕೋಡಿಕೆರೆ, ಮೆಲ್ವಿನ್ ಪಿಂಟೊ, ಹಂಝ ಮೈಂದಗುರಿ, ಪಂಚಾಯಿತಿ ಸದಸ್ಯರಾದ ಅಬೂಬಕ್ಕರ್ ಬಾವ ಜೋಕಟ್ಟೆ, ನಾಗರಿಕ ಸಮಿತಿಯ ಇಕ್ಬಾಲ್ ಜೋಕಟ್ಟೆ, ಮೆಹಬೂಬ್ ಖಾನ್, ಜಗದೀಶ್ ಕಾನ, ಫ್ರಾನ್ಸಿಸ್ ಕಾನ, ಲಾರಿ ಚಾಲಕರ ಸಂಘದ ಆರಿಫ್, ಅಸ್ಕರ್ ಆಲಿ ಜನತಾಕಾಲೊನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT