ಸೋಮವಾರ, ಏಪ್ರಿಲ್ 12, 2021
26 °C

ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2018, 2019 ಹಾಗೂ 2020 ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ 7 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ತಿಳಿಸಿದ್ದಾರೆ.

ಗೌರವ ಪ್ರಶಸ್ತಿ 2020: ರಾಮಚಂದ್ರ ಬೈಕಂಪಾಡಿ (ಸಾಹಿತ್ಯ), ತುಂಗಪ್ಪ ಬಂಗೇರ (ನಾಟಕ), ಆನಂದ ಪೂಜಾರಿ ಹಳೆಯಂಗಡಿ (ಜಾನಪದ). ಪುಸ್ತಕ ಬಹುಮಾನ 2020: ಡಾ. ಕೆ. ಚಿನ್ನಪ್ಪ ಗೌಡ (ಕಾವ್ಯ), ಯುವ ಸಾಧಕ ಪ್ರಶಸ್ತಿ: ಯೋಗೀಶ ಶೆಟ್ಟಿ ಜೆಪ್ಪು (ಸಂಘಟನೆ), ನವೀನ್ ಶೆಟ್ಟಿ ಎಡ್ಮೆಮಾರ್ (ನಿರೂಪಣೆ), ರಮೇಶ ಪಿ. ಮೆತ್ತಿನಡ್ಕ (ಜಾನಪದ ಕಲೆ ಸಂಘಟನೆ), ನಾಗರಾಜ ಭಟ್ (ದೈವ ಕ್ಷೇತ್ರದ ಮೇಲಿನ ಸಂಶೋಧನೆ), ಭರತ್ ಸೌಂದರ್ಯ (ಕಲಾ ಪೋಷಕ), ಸುಭಾಷ್ ನಾಯ್ಕ್‌ (ಶಾಸನ ಸಂಶೋಧನೆ), ದೀಪಕ್ ಪಡುಕೋಣೆ (ತುಳು ಲಿಪಿ ಮೇಲಿನ ಸಂಶೋಧನೆ), ಮಕ್ಕಳ ಪ್ರಶಸ್ತಿ: ತನುಶ್ರೀ ಪಿತ್ರೋಡಿ (ಯೋಗ), ಸನ್ನಿಧಿ ಟಿ. ರೈ ಪೆರ್ಲ (ಕಲೆ), ತಕ್ಷಿಲ್ ದೇವಾಡಿಗ (ಜಾನಪದ), ಸಂಘಟನೆಗಳ ಪ್ರಶಸ್ತಿ: ತುಳುಕೂಟ ಕುವೈಟ್‌, ತುಳು ಸಂಘ ಬರೋಡ, ಬೆಂಗಳೂರು ತುಳುಕೂಟ, ತುಳುಕೂಟ ಉಡುಪಿ, ಸುಬ್ರಹ್ಮಣ್ಯ ಮಹಾಗಣಪತಿ ಕ್ರೀಡಾ ಸಂಘ ತೋಕೂರು, ಹಳೆಯಂಗಡಿ.

ಗೌರವ ಪ್ರಶಸ್ತಿ 2019: ಡಾ. ಎಸ್.ಆರ್. ವಿಘ್ನರಾಜ ಧರ್ಮಸ್ಥಳ (ಸಾಹಿತ್ಯ), ತಿಮ್ಮಪ್ಪ ಗುಜರನ್ ತಲಕಾಲ (ಯಕ್ಷಗಾನ–ಮರಣೋತ್ತರ), ಗುರುವ ಕೊರಗ ಹಿರಿಯಡಕ (ಜಾನಪದ). ಪುಸ್ತಕ ಬಹುಮಾನ 2019: ಕುಶಾಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ (ಕಾವ್ಯ)

ಗೌರವ ಪ್ರಶಸ್ತಿ 2018: ಲಲಿತಾ ರೈ (ಸಾಹಿತ್ಯ), ರತ್ನಾಕರ ರಾವ್ ಕಾವೂರು (ನಾಟಕ), ಎ.ಕೆ.ವಿಜಯ ಕೋಕಿಲಾ (ಸಿನಿಮಾ), ಪುಸ್ತಕ ಬಹುಮಾನ 2018: ಶಾಂತಾರಾಮ ಶೆಟ್ಟಿ (ಕಾವ್ಯ), ರಾಜಶ್ರೀ ಟಿ. ರೈ ಪೆರ್ಲ (ಕಾದಂಬರಿ).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು