ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುದ್ದು ಕೊಡ್ತರ್’ ತುಳು ಕಾದಂಬರಿ ಬಿಡುಗಡೆ

Last Updated 25 ಮೇ 2022, 16:02 IST
ಅಕ್ಷರ ಗಾತ್ರ

ಮಂಗಳೂರು: ರಂಗಕರ್ಮಿ, ಸಾಹಿತಿ ಶಶಿರಾಜ್ ರಾವ್ ಕಾವೂರು ಅವರ ‘ಪುದ್ದು ಕೊಡ್ತರ್’ (ಕೊರಗೆರ್ನೆ ಗುರಿಕಾರೆ) ಚೊಚ್ಚಲ ತುಳು ಕಾದಂಬರಿ ಬುಧವಾರ ಬಿಡುಗಡೆಯಾಯಿತು.

ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು, ಸೇಂಟ್ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗ, ವಿಕಾಸ ಮಂಗಳೂರು ಹಾಗೂ ಆಕೃತಿ ಆಶಯ ಪ್ರಕಾಶನದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ. ಬಿ.ಎ. ವಿವೇಕ ರೈ ಅವರು ಕಾದಂಬರಿ ಬಿಡುಗಡೆಗೊಳಿಸಿದರು. ಶಶಿರಾಜ್ ಕಾವೂರು ಅವರು ‘ಪುದ್ದು ಕೊಡ್ತರ್’ ಕಾದಂಬರಿಯಲ್ಲಿ ಕೊರಗ ಸಮುದಾಯದ ಬದುಕು, ಸಾಮಾಜಿಕ ಸ್ಥಿತಿ–ಗತಿಯ ಚಿತ್ರಣವನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.

ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ ಮಾತನಾಡಿ, ಕೊರಗರ ಬಗ್ಗೆ ಕನ್ನಡದಲ್ಲಿ ಕೆಲವು ಕೃತಿಗಳು ಬಂದಿವೆ. ಆದರೆ, ಅವರ ಬಗೆಗಿನ ಸಮಗ್ರ ನೋಟ ತೆರೆದಿರುವ ಕೃತಿಗಳು ವಿರಳವಾಗಿವೆ. ‘ಪುದ್ದು ಕೊಡ್ತರ್’ ಈ ಕೊರತೆಯನ್ನು ನೀಗಿಸಿದೆ’ ಎಂದರು.

ಕೃತಿಕಾರ ಶಶಿರಾಜ್ ರಾವ್ ಕಾವೂರು, ಸೇಂಟ್ ಅಲೋಶಿಯಸ್ ಕಾಲೇಜಿನ ಕುಲಸಚಿವ ಡಾ. ಆಲ್ವಿನ್ ಡೇಸಾ, ಚಿತ್ರ ನಿರ್ಮಾಪಕ ದೇವದಾಸ್ ಪಾಂಡೇಶ್ವರ, ಕೊರಗ ಅಭಿವೃದ್ಧಿ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಮೇಶ್ ಮಂಚಕಲ್, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಹಾಲಿಂಗ ಭಟ್, ವಿಕಾಸ ಮಂಗಳೂರು ಇದರ ಅಧ್ಯಕ್ಷ ಪ್ರೊ. ಕೃಷ್ಣಮೂರ್ತಿ, ಆಕೃತಿ ಆಶಯ ಪ್ರಕಾಶನದ ಮುಖ್ಯಸ್ಥ ನಾಗೇಶ್ ಕಲ್ಲೂರು ಇದ್ದರು.

ಡಾ. ದಿನೇಶ್ ನಾಯಕ್ ಸ್ವಾಗತಿಸಿದರು. ಮೈಮ್ ರಾಮ್‍ದಾಸ್ ನಿರೂಪಿಸಿದರು. ಕೊರಲ್ ಕಲಾ ತಂಡದಿಂದ ಡೋಲು ಪ್ರಾತ್ಯಕ್ಷಿಕೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT