ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು ಜಾತ್ರೆ; ಗೊನೆ ಮುಹೂರ್ತ

ಏ.10ರಿಂದ 19ರ ವರೆಗೆ ಜಾತ್ರೋತ್ಸವ: 17ರಂದು ಬ್ರಹ್ಮರಥೋತ್ಸವ
Last Updated 2 ಏಪ್ರಿಲ್ 2023, 5:19 IST
ಅಕ್ಷರ ಗಾತ್ರ

ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯುವ ವರ್ಷಾವಧಿ ಜಾತ್ರೋತ್ಸವಕ್ಕೆ ಸಂಬಂಧಿಸಿ ಶನಿವಾರ ಗೊನೆ ಮುಹೂರ್ತ ನಡೆಯಿತು. ಈ ಬಾರಿ ದೇವಳದ ತೋಟದಿಂದಲೇ ಗೊನೆ ಕಡಿದು ಮುಹೂರ್ತ ನೆರವೇರಿಸಲಾಯಿತು.

ಪೂರ್ವಶಿಷ್ಟ ಸಂಪ್ರದಾಯದಂತೆ ದೇವಳದ ಸತ್ಯಧರ್ಮ ನಡೆಯಲ್ಲಿ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಿ, ಬಳಿಕ ವಾದ್ಯ ದೊಂದಿಗೆ ದೇವಳದ ರಥ ಬೀದಿಯ ಮೂಲಕ ದೇವಳದ ಅಯ್ಯಪ್ಪ ಗುಡಿಯ ಬಳಿಯಲ್ಲಿರುವ ದೇವಳದ ತೋಟಕ್ಕೆ ತೆರಳಿ ಗೊನೆ ಕಡಿಯಲಾಯಿತು. ದೇವ ಳದ ಪ್ರಧಾನ ಅರ್ಚಕ ವಿ.ಎಸ್.ಭಟ್ ಗೊನೆ ಮುಹೂರ್ತ ನಡೆಸಿಕೊಟ್ಟರು. ಇನ್ನೊಬ್ಬರು ಪ್ರಧಾನ ಅರ್ಚಕ ವಸಂತ ಕೆದಿಲಾಯ ಸಹಕರಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮ್ದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ವೀಣಾ ಬಿ.ಕೆ, ಡಾ.ಸುಧಾ ಎಸ್. ರಾವ್, ಬಿ.ಐತ್ತಪ್ಪ ನಾಯ್ಕ, ರಾಮಚಂದ್ರ ಕಾಮತ್, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ನಗರಸಭೆ ಅಧ್ಯಕ್ಷ ಕೆ. ಜೀವಂದರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಗೌರಿ, ದೇವಳದ ವಾಸ್ತು ಎಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ ಜಗನ್ನಿವಾಸ ರಾವ್,
ಮಾಜಿ ಮೊಕ್ತೇಸರರಾದ ಚಿದಾನಂದ ಬೈಲಾಡಿ, ರಮೇಶ್ ಬಾಬು, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯೆ ನಯನಾ ರೈ, ರತ್ನಾಕರ ನಾಕ್, ಕಿಟ್ಟಣ್ಣ ಗೌಡ, ರಾಧಾಕೃಷ್ಣ ಗೌಡ, ಅರುಣ್ ಕುಮಾರ್ ಪುತ್ತಿಲ, ಶ್ರೀಧರ್ ಪಟ್ಲ, ಪದ್ಮನಾಭ ಶೆಟ್ಟಿ, ರಾಜೇಶ್ ಬನ್ನೂರು, ಗಣೇಶ್ ಕೆದಿಲಾಯ, ಎಚ್.ಉದಯ, ಯು.ಲೋಕೇಶ್ ಹೆಗ್ಡೆ, ಭಾಸ್ಕರ್ ಬಾರ್ಯ, ಜಯರಾಜ್ ಭಂಡಾರಿ, ಮಾಧವ ಪೂಜಾರಿ ಇದ್ದರು.

ದೇವಳದ ಹೊರಾಂಗಣದ ರಥ ಮಂದಿರದಲ್ಲಿರುವ ಚಂದ್ರಮಂಡಲ ಮತ್ತು ಹೂವಿನ ರಥವನ್ನು ಹೊರಗೆ ತರುವ ಮುಹೂರ್ತವೂ ಶನಿವಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT