ಮನೆಯಲ್ಲಿದ್ದ ಧವಸ ಧಾನ್ಯಗಳೆಲ್ಲ ಒದ್ದೆಯಾಗಿವೆ. ಗೋಡೆಗೆ ಜೋತು ಹಾಕಿದ್ದ ಮೊಮ್ಮಗಳ ಶಾಲೆಯ ಚೀಲವೂ ನೀರಿನಲ್ಲಿ ಮುಳುಗುತ್ತದೆಯೇನೋ ಎಂದು ಚಿಂತೆಯಾಗಿದೆ
ಸುಶೀಲಾ ಅತ್ತಾವರ ನಿವಾಸಿ
ಈ ಮಳೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಮಳೆ ನಿಂತರೂ ಮನೆಗೆ ಮರಳುತ್ತೇನೆ ಎಂಬ ನಂಬಿಕೆ ಇಲ್ಲ. ಮಳೆ ಮುಗಿಯುವಷ್ಟರಲ್ಲಿ ಮನೆ ಇರುತ್ತದೋ ಇಲ್ಲವೋ
ಸರಸ್ವತಿ ಅತ್ತಾವರ ನಿವಾಸಿ
ಹೂಳು ತೆಗೆಯಲಿ– ತಡೆಗೋಡೆ ಕಟ್ಟಲಿ
‘ಮಳೆ ನೀರು ಹರಿಯುವ ತೋಡಿನಲ್ಲಿ ಹೂಳು ತುಂಬಿದ್ದರಿಂದ ನೀರು ಉಕ್ಕಿ ಹರಿಯುತ್ತಿದೆ. ತೋಡಿನ ಹೂಳನ್ನು ತೆರವುಗೊಳಿಸಬೇಕು. ದಂಡೆಯಲ್ಲಿ ಕಾಂಕ್ರೀಟ್ ತಡೆಗೋಡೆ ಕಟ್ಟಬೇಕು. ಇಲ್ಲದಿದ್ದರೆ ಪ್ರತಿ ಮಳೆಗಾಲದಲ್ಲೂ ತೋಡಿನ ನೀರು ನಮ್ಮ ಮನೆಯೊಳಗೆ ಬರುತ್ತದೆ’ ಎಂದು ಸುಶೀಲಾ ತಿಳಿಸಿದರು.