ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಳಲಿ: 29 ದಿನಗಳ ವಾರ್ಷಿಕ ಜಾತ್ರೆ ಆರಂಭ

Published 15 ಮಾರ್ಚ್ 2024, 15:50 IST
Last Updated 15 ಮಾರ್ಚ್ 2024, 15:50 IST
ಅಕ್ಷರ ಗಾತ್ರ

ಬಂಟ್ವಾಳ: ಒಂದು ತಿಂಗಳ ತನಕ ವಾರ್ಷಿಕ ಜಾತ್ರೆ ನಡೆಯುವ ಇಲ್ಲಿನ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಈ ಬಾರಿ 29 ದಿನಗಳ ಜಾತ್ರೆಗೆ ಶುಕ್ರವಾರ ಸಾಂಪ್ರದಾಯಿಕ ರೀತಿಯಲ್ಲಿ ಚಾಲನೆ ನೀಡಲಾಯಿತು.

ಇಲ್ಲಿನ ಸಂಪ್ರದಾಯದಂತೆ ದೈವ ವೇಷಧಾರಿ ಪಾತ್ರಿ ವಾಲಗ ಊದುವ ಶೇರಿಗಾರನ ಕಿವಿಯಲ್ಲಿ ಗುಟ್ಟಾಗಿ ‘29 ಪೋಪಿನಾನಿ ಐತಾರ ದಿನತ್ತಾನಿ ಆರಡ’ ಎನ್ನುವ ಮೂಲಕ 29 ದಿನಗಳ ಜಾತ್ರೆ ಎಂದು ಪ್ರಕಟಿಸಿದರು.

ಐದು ದಿನ ಚೆಂಡು: ಶುಕ್ರವಾರ ಜಾತ್ರೆ ಆರಂಭಗೊಂಡಿದ್ದು ಏಪ್ರಿಲ್‌ 6ರಂದು ಮೊದಲ ಚೆಂಡು, 7ರಂದು ಎರಡನೇ ಚೆಂಡು, 8ರಂದು ಮೂರನೇ ಚೆಂಡು, 9ರಂದು ನಾಲ್ಕನೇ ಚೆಂಡು, 10ರಂದು ಕಡೇ ಚೆಂಡು, 11ರಂದು ಮಹಾ ರಥೋತ್ಸವ ಮತ್ತು 12ರಂದು ಅವಭೃತ ಸ್ನಾನ (ಆರಡ) ನಡೆಯಲಿದೆ.

ಪ್ರತಿ 5 ದಿನಗಳಿಗೊಮ್ಮೆ ದಂಡಮಾಲೆ, ಕೋಳಿಗುಂಟ, ಜಾತ್ರೆ ಬಳಿಕ ಕೊಡಮಣಿತ್ತಾಯಿ-ಉಳ್ಳಾಕ್ಲು-ಮಗೃಂತಾಯಿ-ಬಂಟ ಪರಿವಾರ ದೈವಗಳ ನೇಮೋತ್ಸವ ನಡೆಯುವುದು ಪೊಳಲಿಯ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT