‘₹7.5 ಕೋಟಿ ಯೋಜನೆ ಮಂಜೂರು’
ಜನರ ಸ್ಪಂದನೆ ಯಿಂದ ವಾರ್ಡ್‌ನಲ್ಲಿ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಬಿಜೈ ನ್ಯೂ ರೋಡ್, ಭಜನಾ ಮಂದಿರ ರಸ್ತೆ ಸೇರಿದಂತೆ ಪ್ರಮುಖ ರಸ್ತೆ ನಿರ್ಮಾಣ ಕೆಲಸಗಳು ನಡೆದಿವೆ. ಈ ಬಾರಿ ರಸ್ತೆಗಳಿಗೆ ಕಾಂಕ್ರೀಟ್ ಮಾಡಿಸಲಾಗಿದೆ. ನೀರು ಪೂರೈಕೆ, ಸೇರಿದಂತೆ ಎಲ್ಲ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ಹಿಂದಿನ ಅವಧಿಯಲ್ಲಿ ವಾರ್ಡ್ ಸದಸ್ಯನಾಗಿ ಇದ್ದಾಗ ಕೊಟ್ಟಾರ ಕ್ರಾಸ್‌ನಿಂದ ಕುಂಟಿಕಾನ ಜಂಕ್ಷನ್ ವರೆಗೆ ರಸ್ತೆ ವಿಸ್ತರಣೆ ಮಾಡಿಸಿದ್ದೇನೆ ಎಂದು ವಾರ್ಡ್‌ನ ನಿಕಟಪೂರ್ವ ಸದಸ್ಯ ಲ್ಯಾನ್ಸಿ ಪಿಂಟೊ ಹೇಳಿದರು.
ಒಳ ಚರಂಡಿ ಪೈಪ್‌ಲೈನ್ ಬದಲಿಸಲು ₹7.5 ಕೋಟಿ ಮೊತ್ತದ ಯೋಜನೆಗೆ ಮಂಜೂರು ದೊರೆತಿದೆ. ಕುಂಟಿಕಾನ ಜಂಕ್ಷನ್‌ನಿಂದ ಬಿಜೈ ಕೊಡಿಯಾಲ್‌ಗುತ್ತುವರೆಗೆ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.