ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ‘ರಿಕ್ಷಾ ಡೈರಿ’ ಪುಸ್ತಕ ಲೋಕಾರ್ಪಣೆ

Published 11 ಮೇ 2024, 5:38 IST
Last Updated 11 ಮೇ 2024, 5:38 IST
ಅಕ್ಷರ ಗಾತ್ರ

ಮಂಗಳೂರು: ಮಾಂಡ್ ಸೊಭಾಣ್ ಪ್ರಕಾಶನದ 22ನೇ ಪುಸ್ತಕ ರೋನಿ ಅರುಣ್ ಬರೆದ ಲೇಖನಗಳ ಸಂಗ್ರಹ ‘ರಿಕ್ಷಾ ಡೈರಿ’ ಗುರುವಾರ ಲೋಕಾರ್ಪಣೆಗೊಂಡಿತು.

ಲೇಖಕಿ ಗ್ಲೇಡಿಸ್ ರೇಗೊ ಪುಸ್ತಕ ಬಿಡುಗಡೆಗೊಳಿಸಿದರು. ಪಶ್ಚಿಮ್ ಟ್ರಸ್ಟ್ ನಿರ್ದೇಶಕ ರೋಹಿತ್ ಸಾಂಕ್ತುಸ್ ಅತಿಥಿಯಾಗಿದ್ದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ತೆಲೊಕಾ ಸಂಸ್ಥೆಯ ನಿರ್ದೇಶಕಿ ಕ್ಲಾರಾ ಡಿಕೂನ್ಹಾ ಇದ್ದರು. ವಿತೊರಿ ಕಾರ್ಕಳ ನಿರೂಪಿಸಿದರು.

‘ರಿಕ್ಷಾ ಡೈರಿ’ಯು ದಿರ್ವೆಂ ಕೊಂಕಣಿ ಮಾಸಿಕದಲ್ಲಿ ಪ್ರಕಟವಾದ 44 ಲೇಖನಗಳ ಸಂಗ್ರಹವಾಗಿದೆ. ಕಲಾವಿದ ವಿಲ್ಸನ್ ಕಯ್ಯಾರ್ ಮುಖಪುಟ ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT