ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ, ನೆಕ್ಕಿಲಾಡಿಯಲ್ಲಿ ಕುಮಾರಧಾರಾ ಸೇತುವೆ ಮೇಲೆ ಕೆಸರು ತುಂಬಿದ ರಸ್ತೆಯಲ್ಲಿ ಪಲ್ಟಿಯಾದ ದ್ವಿಚಕ್ರ ವಾಹನ ಸವಾರ, ಕಾಮಗಾರಿ ಗುತ್ತಿಗೆದಾರ ಸಂಸ್ಥೆ ಕೆಎನ್ಆರ್ ವಿರುದ್ಧ ಪೊಲೀಸ್ ದೂರು ನೀಡಿದ ಕೂಡಲೇ ಆ ರಸ್ತೆಯ ಹೊಂಡಗಳನ್ನು ಸಂಸ್ಥೆ ಡಾಂಬರೀಕರಣಗೊಳಿಸಿ ಮುಚ್ಚಿದೆ.

ನೆಕ್ಕಿಲಾಡಿಯಲ್ಲಿರುವ ಕುಮಾರಧಾರ ನದಿಯ ಒಂದು ಸೇತುವೆಯನ್ನು ಮುಚ್ಚಿ ಅದರಲ್ಲಿ ಚತುಷ್ಪಥ ಹೆದ್ದಾರಿಯ ಕಾಮಗಾರಿ ನಿರ್ವಹಿಸಲಾಗುತ್ತಿತ್ತು. ಅದರ ಬಳಿ ಇರುವ ಮತ್ತೊಂದು ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಹೆದ್ದಾರಿಯಲ್ಲಿ ಹೊಂಡ-ಗುಂಡಿಗಳಿದ್ದವು. ಕಾಮಗಾರಿ ನಡೆಸುವ ಸಂದರ್ಭ ಈ ರಸ್ತೆಗೆ ಮಣ್ಣು ಬಿದ್ದಿತ್ತು. ದೂಳು ಏದ್ದೇಳಬಾರದೆಂದು ಗುತ್ತಿಗೆದಾರ ಸಂಸ್ಥೆಯು ರಸ್ತೆಗೆ ನೀರು ಹಾಕಿತ್ತು. ಇದರಿಂದಾಗಿ ರಸ್ತೆಯು ಕೆಸರಾಗಿ ಜಾರುತ್ತಿತ್ತು.

ನೆಕ್ಕಿಲಾಡಿಯ ಅಬ್ದುಲ್ ರಹಿಮಾನ್ ಯುನಿಕ್ ಅದೇ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಾಗ ಹೊಂಡಕ್ಕೆ ಬಿದ್ದು ಅವರ ದ್ವಿಚಕ್ರ ವಾಹನ ಪಲ್ಟಿಯಾಗಿ, ಅವರು ಗಾಯಗೊಂಡಿದ್ದರು. ಗುತ್ತಿಗೆದಾರ ಸಂಸ್ಥೆ ನಿರ್ವಹಿಸುತ್ತಿರುವ ಅವೈಜ್ಞಾನಿಕ ಕಾಮಗಾರಿಯೇ ಅಪಘಾತಕ್ಕೆ ಕಾರಣ ಎಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ಎಚ್ಚೆತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ಗಳು, ಕೆಎನ್ಆರ್ ಸಂಸ್ಥೆಯ ಎಂಜಿನಿಯರ್ಗಳು, ಅಧಿಕಾರಿಗಳು ಕಾಮಗಾರಿ ನಡೆಸಿ ಹೊಂಡ-ಗುಂಡಿಗಳನ್ನು ಮುಚ್ಚಿದ್ದಾರೆ. ಅವರ ಮನವಿಯ ಬಳಿಕ ಅಬ್ದುಲ್ ರಹಿಮಾನ್ ಅವರು ಪೊಲೀಸರಿಗೆ ನೀಡಿದ ದೂರನ್ನು ಹಿಂಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.