ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಆರ್‌ಪಿಎಲ್‌ ರಿಫೈನರಿ ನಿರ್ದೇಶಕರಾಗಿ ಸಂಜಯ್‌ ವರ್ಮಾ

Last Updated 9 ಜೂನ್ 2020, 11:31 IST
ಅಕ್ಷರ ಗಾತ್ರ

ಮಂಗಳೂರು: ಎಂಆರ್‌ಪಿಎಲ್‌ನ ರಿಫೈನರಿ ನಿರ್ದೇಶಕರಾಗಿ ಸಂಜಯ್‌ ವರ್ಮಾ ಅಧಿಕಾರ ವಹಿಸಿಕೊಂಡಿದ್ದಾರೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ನೇಮಕ ಮಾಡಿದೆ.

ಪೆಟ್ರೋಲಿಯಂ ರಿಫೈನರಿ, ಪೆಟ್ರೋಕೆಮಿಕಲ್ಸ್‌, ಫರ್ಟಿಲೈಸರ್‌ ಕ್ಷೇತ್ರದಲ್ಲಿ 30 ವರ್ಷದ ಅನುಭವ ಹೊಂದಿರುವ ಸಂಜಯ್‌ ವರ್ಮಾ, 25 ವರ್ಷಗಳ ಕಾಲ ಎಂಆರ್‌ಪಿಎಲ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಎಂಆರ್‌ಪಿಎಲ್‌ನ ಸಮೂಹ ಮಹಾಪ್ರಬಂಧಕರಾಗಿ ಪ್ರಭಾರ ಕಾರ್ಯನಿರ್ವಹಿಸುತ್ತಿದ್ದರು. ರಿಫೈನರಿ ನಿರ್ವಹಣಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಜಬಲ್‌ಪುರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್‌ ಬಿಇ ಪದವಿ ಪಡೆದಿರುವ ಅವರು, ಜಗದೀಶ್‌ಪುರದ ಇಂಡೋ–ಗಲ್ಫ್‌ ಫರ್ಟಿಲೈಸರ್‌, ಗುಜರಾತಿನ ಹಾಝಿರಾದ ರಿಲಾಯನ್ಸ್ ಇಂಡಸ್ಟ್ರೀಸ್‌ನ ಪೆಟ್ರೋ ಕೆಮಿಕಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ. 1993 ರ ಡಿಸೆಂಬರ್‌ 14 ರಂದು ಎಂಆರ್‌ಪಿಎಲ್‌ಗೆ ಸೇರ್ಪಡೆಯಾದ ಇವರು, ಎಂಆರ್‌ಪಿಎಲ್‌ನ 1,2 ಮತ್ತು 3 ನೇ ಹಂತದ ವಿಸ್ತರಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT