ಉಜಿರೆ: ಶಾಸನ ಮತ್ತು ಹಸ್ತಪ್ರತಿಗಳು ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯ ಅಮೂಲ್ಯ ಜ್ಞಾನದ ನಿಧಿಗಳಾಗಿವೆ ಎಂದು ಉಜಿರೆಯಲ್ಲಿರುವ ಹಾ.ಮಾ.ನಾ. ಸಂಶೋಧನಾ ಕೇಂದ್ರದ ಸ್ಥಾಪಕ ನಿರ್ದೇಶಕ ಎಸ್.ಡಿ.ಶೆಟ್ಟಿ ಹೇಳಿದರು.
ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗ ಮತ್ತು ಹಾಮಾನಾ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸನಗಳು ಮತ್ತು ಹಸ್ತಪ್ರತಿಗಳ ಬಗ್ಗೆ ಮಾಡಿದ ಅಧ್ಯಯನ, ಸಂಶೋಧನೆ ಹೆಚ್ಚಿನ ಸಂತೋಷ ಮತ್ತು ತೃಪ್ತಿ ನೀಡಿದೆ. ಎಷ್ಟೋ ಮನೆಗಳಲ್ಲಿ ಅಮೂಲ್ಯ ಗ್ರಂಥಗಳು ಹಾಗೂ ಹಸ್ತಪ್ರತಿಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದಕ್ಕೆ ಪೂಜೆ ಮಾಡುತ್ತಾರೆ. ಕ್ರಮೇಣ ಅವುಗಳು ಗೆದ್ದಲು ಹಿಡಿದು ನಾಶವಾಗಿವೆ ಎಂದರು.
ಅಭಿನಂದನಾ ಭಾಷಣ ಮಾಡಿದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಯಕುಮಾರ್ ಶೆಟ್ಟಿ, ವಿದ್ವಾಂಸರೂ, ಸಂಶೋಧಕರೂ ಆದ ಎಸ್.ಡಿ.ಶೆಟ್ಟಿ ಅವರು ಸ್ಥಾಪಕ ನಿರ್ದೇಶಕರಾಗಿ ಹಾ.ಮಾ.ನಾ. ಸಂಶೋಧನಾ ಕೇಂದ್ರಕ್ಕೆ ಭದ್ರ ಬುನಾದಿ ಹಾಕಿ ಅನೇಕ ಮಂದಿಗೆ ಸಂಶೋಧನಾ ಕಾರ್ಯಕ್ಕೆ ಮಾರ್ಗದರ್ಶಿಯಾಗಿ ಪ್ರೋತ್ಸಾಹ ನೀಡಿದ್ದಾರೆ. ಸಮಾಜಮುಖಿ ಸಂಶೋಧನಾ ಪ್ರವೃತ್ತಿ ಹೊಂದಿರುವ ಅವರು ಜನಸಾಮಾನ್ಯರಲ್ಲಿಯೂ ಸಂಶೋಧನೆ ಬಗ್ಯೆ ಆಸಕ್ತಿ, ಕುತೂಹಲ ಮೂಡಿಸಿದ್ದಾರೆ ಎಂದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್.ಸತೀಶ್ಚಂದ್ರ, ರಾಧಾಕೃಷ್ಣ ಕೆದಿಲಾಯ ಮಾತನಾಡಿದರು.
ಪ್ರಾಂಶುಪಾಲ ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಭೋಜಮ್ಮ ಕೆ.ಎನ್.ಉಪಸ್ಥಿತರಿದ್ದರು.
ಹಮಾನಾ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ದಿವಾಕರ ಸ್ವಾಗತಿಸಿದರು. ಉಪನ್ಯಾಸಕ ನಾಗರಾಜ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.