ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಅಥೆನಾ: ಉಪ ಪ್ರಾಂಶುಪಾಲರ ಬೀಳ್ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದ ಅಥೆನಾ ನರ್ಸಿಂಗ್ ಕಾಲೇಜು ಮತ್ತು ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ ನಿರ್ಗಮನ ಉಪ ಪ್ರಾಂಶುಪಾಲೆ ಸಿಸ್ಟರ್‌ ಡಾ. ಅಲ್ಫೊನ್ಸಾ ಅಂಚೆರಿಲ್ ಅವರಿಗೆ  ಬೀಳ್ಕೊಡುಗೆ ನೀಡಲಾಯಿತು. ಹೊಸದಾಗಿ ನೇಮಕಗೊಂಡ ಉಪಪ್ರಾಂಶುಪಾಲೆ ಸಿಸ್ಟರ್‌ ಐಲೀನ್ ಮಥಾಯಸ್ ಅವರನ್ನು ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸ್ವಾಗತಿಸಲಾಯಿತು.

ಸಂಸ್ಥೆಯಲ್ಲಿ 12 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ನಿರ್ಗಮಿತ ಉಪ ಪ್ರಾಂಶುಪಾಲರಿಗೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಮ್ಮ ಸಾಧನೆಯ ಆಡಿಯೋ ಮತ್ತು ವಿಡಿಯೋ ಪ್ರಸ್ತುತಿಯಲ್ಲಿ ಕೃತಜ್ಞತೆ ವ್ಯಕ್ತಪಡಿಸಿದರು. ಸಿ. ಅಲ್ಫೋನ್ಸಾ ಅಂಚೇರಿಲ್ ಹಾಡಿದರು. ಪ್ರಾಧ್ಯಾಪಕಿ ಸುನಿತಾ ಡಿಸೋಜ ಕೃತಜ್ಞತೆ ಸಲ್ಲಿಸಿದರು.

ಅಧ್ಯಕ್ಷ ಆರ್. ಎಸ್. ಶೆಟ್ಟಿಯನ್, ಕಾರ್ಯದರ್ಶಿ ಆಶಾ ಶೆಟ್ಟಿಯನ್, ಟ್ರಸ್ಟಿ ಡಾ. ಆಶಿತ್ ಶೆಟ್ಟಿಯನ್ ಮಾತನಾಡಿದರು. ಸಿಸ್ಟರ್‌ ಡೀನಾ ಡಿ. ಅಲ್ಮೇಡಾ, ಸಿ. ದೀಪಾ ಪೀಟರ್, ನೂತನ ಉಪ ಪ್ರಾಂಶುಪಾಲೆ ಸಿ. ಐಲೀನ್ ಮಥಾಯಸ್, ಸಹಾಯಕ ಉಪನ್ಯಾಸಕರಾದ ಶ್ವೇತಾ ಕರ್ಕೇರ, ಪ್ರಿಯಾ ಕಾರ್ನೆಲಿಯೋ, ಉಪನ್ಯಾಸಕಿ ರೀಜಾ ಫೆರಾವೊ, ಪ್ರಿಯಾ ಕಾರ್ನೆಲಿಯೋ ಶುಶ್ರೂಷಕಿ ವಿನ್ನಿ ಕ್ರಾಸ್ತಾ  ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು