ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಕೆಎಂಸಿಯಲ್ಲಿ ವಯಸ್ಕರ ಲಸಿಕಾ ಕೇಂದ್ರ ಆರಂಭ

Published 2 ಜುಲೈ 2024, 4:37 IST
Last Updated 2 ಜುಲೈ 2024, 4:37 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಸ್ಪತ್ರೆಯು, ವಯಸ್ಕರಿಗೆ ಸಮಗ್ರ ರೋಗ ನಿರೋಧಕ ಸೇವೆಗಳನ್ನು ಒದಗಿಸುವ ಭಾಗವಾಗಿ ವಯಸ್ಕರ ಲಸಿಕಾ ಕೇಂದ್ರ ತೆರೆದಿದೆ.

ಬಿ.ಎ.ಎಸ್.ಎಫ್. ಇಂಡಿಯಾ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಸಂತೋಷ್ ಪೈ ಮತ್ತು ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಲಿಮಿಟೆಡ್‌ನ ವೈದ್ಯಕೀಯ ಸೇವೆಗಳ ಜಂಟಿ ಪ್ರಧಾನ ವ್ಯವಸ್ಥಾಪಕ ಯೋಗೀಶ ಕೆ ಅವರು ಸೋಮವಾರ ಲಸಿಕಾ ಕೇಂದ್ರವ ಉದ್ಘಾಟಿಸಿದರು. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಂಎಎಚ್ಇ- ಮಾಹೆ) ಮಂಗಳೂರು ಕ್ಯಾಂಪಸ್‌ನ ಕುಲಾಧಿಪತಿ ಡಾ. ದಿಲೀಪ್ ಜಿ.ನಾಯಕ್ ಹಾಗೂ ಮಂಗಳೂರು ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಇದ್ದರು.

ಸಗೀರ್ ಸಿದ್ದಿಕಿ ಮಾತನಾಡಿ, ‘ಈ ಪ್ರಾದೇಶಿಕ ಕೇಂದ್ರವು ಅತ್ಯಾಧುನಿಕ ಸೌಲಭ್ಯಗಳ ಜೊತೆಗೆ ವೃತ್ತಿಪರ ವೈದ್ಯಕೀಯ ತಂಡವನ್ನು ಹೊಂದಿದೆ. ಇದು ವಯಸ್ಕರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸಲಿದೆ. ಇದು ನಗರದ ಮೊದಲ ವಯಸ್ಕರ ಲಸಿಕಾ ಕೇಂದ್ರ’ ಎಂದರು.

ಕೆಎಂಸಿ ಆಸ್ಪತ್ರೆಯ ಆಂತರಿಕ ಔಷಧ ಸಲಹೆಗಾರ ಡಾ. ಹರೂನ್ ಹುಸೇನ್ ಮಾತನಾಡಿ, ʻಈ ಕೇಂದ್ರವು ಇನ್ಪ್ಯುಯೆಂಜಾ, ನ್ಯುಮೋಕೊಕಲ್, ಶಿಂಗಲ್ಸ್ ಮುಂತಾದ ಲಸಿಕೆಗಳನ್ನು ನೀಡುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT