ಮಂಗಳೂರು: ಸ್ಟೂಡೆಂಟ್ಸ್ ಫಾರ್ ಡೆವಲಪ್‌ಮೆಂಟ್‌ನ(ಎಸ್‌ಎಫ್‌ಡಿ) ಮಂಗಳೂರು ಘಟಕದ ವಿದ್ಯಾರ್ಥಿ ಸ್ವಯಂಸೇವಕರು ಪಣಂಬೂರು ಕಡಲ ಕಿನಾರೆಯನ್ನು ಶುಚೀಕರಿಸುವ ಮೂಲಕ ‘2023’ಕ್ಕೆ ವಿದಾಯ ಹೇಳಿ, ಹೊಸ ವರ್ಷವನ್ನು ಬರಮಾಡಿಕೊಂಡರು.

ನಗರದ ವಿವಿಧ ಕಾಲೇಜುಗಳ ಎಸ್‌ಎಫ್‌ಡಿ ಘಟಕಗಳ 120ಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂಸೇವಕರು ಪಣಂಬೂರು ಕಿನಾರೆಯಲ್ಲಿ ಸೋಮವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಸ ಹೆಕ್ಕಿದರು.

ಎಸ್‌ಎಫ್‌ಡಿಯು 2023ರ ಜ.1ರಂದು ಕಿನಾರೆ ಶುಚಿಕರಣ ಅಭಿಯಾನ ನಡೆಸಿತ್ತು. ಈ ಸಲದ ಹೊಸ ವರ್ಷಾಚರಣೆ ಸಂದರ್ಭದಲ್ಲೂ ಅದನ್ನು ಮುಂದುವರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಎಸ್‌ಎಫ್‌ಡಿ ಮಂಗಳೂರು ಘಟಕದ ಪ್ರಮುಖರಾದ ನಿಶಾನ್ ಆಳ್ವ ಕಾವೂರು, ಶ್ರೀಹರಿ ಕೆರೆಕೊಡಿಗೆ, ನಿಶಿತ್ ಬಂಟ್ವಾಳ್, ಪ್ರಥಮ್ ರೈ ಕೋಡಿಕಲ್, ಶ್ರೀಶ ರಾವ್ ಮತ್ತಿತರರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.