ಮಂಗಳೂರು: ಶಾರ್ಜಾ ಹೆಲ್ತ್ಕೇರ್ ಸಿಟಿಯಲ್ಲಿ ತುಂಬೆ ಮನೋವೈದ್ಯಕೀಯ ಮತ್ತು ಪುನರ್ವಸತಿ ಆಸ್ಪತ್ರೆ ಸ್ಥಾಪಿಸಲು ಶಾರ್ಜಾ ಹೆಲ್ತ್ ಅಥಾರಿಟಿ ಮತ್ತು ಶಾರ್ಜಾ ಹೆಲ್ತ್ಕೇರ್ ಸಿಟಿ ಹಾಗೂ ತುಂಬೆ ಗ್ರೂಪ್ಗಳ ನಡುವೆ ಪರಸ್ಪರ ತಿಳಿವಳಿಕಾ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ನಿರ್ಮಾಣ ಕಾರ್ಯ 2025ರ ಜೂನ್ ತಿಂಗಳಲ್ಲಿ ಆರಂಭವಾಗಿ 2026ರ ನಡುವಿನ ಅವಧಿಯಲ್ಲಿ ಆಸ್ಪತ್ರೆ ಲೋಕಾರ್ಪಣೆಗೊಳ್ಳಲಿದೆ.

ಆಸ್ಪತ್ರೆಯು ಉನ್ನತ ಕ್ಲಿನಿಕಲ್ ಮಾನದಂಡಗಳನ್ನು ಪೂರೈಸಲು ಸುಧಾರಿತ ಚಿಕಿತ್ಸಾ ವಿಧಾನ, ಸಮಗ್ರ ಪುನರ್ವಸತಿ ಕಾರ್ಯಕ್ರಮ, ಇಂಟಿಗ್ರೇಟೆಡ್ ಟೆಲಿ ಹೆಲ್ತ್ ಪರಿಹಾರಗಳನ್ನು ನೀಡುತ್ತದೆ. ರೋಗಿಗಳ ಆರೈಕೆಗೆ ಸಮಗ್ರ ಮತ್ತು ವೈಯಕ್ತಿಕ ವಿಧಾನವನ್ನು ಖಾತ್ರಿಪಡಿಸುತ್ತದೆ ಎಂದು ತುಂಬೆ ಗ್ರೂಪ್ ತಿಳಿಸಿದೆ.

‘ಇದು ಈ ಪ್ರದೇಶದ ಮೊದಲ ಖಾಸಗಿ ಮನೋವೈದ್ಯಕೀಯ ಮತ್ತು ಪುನರ್ವಸತಿ ಆಸ್ಪತ್ರೆಯಾಗಿದ್ದು, ಅಂತರರಾಷ್ಟ್ರೀಯ ರೋಗಿಗಳನ್ನೂ ಸೆಳೆಯಲಿದೆ. ಈ ಪ್ರದೇಶದಲ್ಲಿ ಸಮುದಾಯಕ್ಕೆ ಸೇವೆ ಸಲ್ಲಿಸುವ ಅತ್ಯುತ್ತಮ ಆಸ್ಪತ್ರೆಯನ್ನಾಗಿ ಮಾಡಲು ನಾವು ಬಯಸುತ್ತೇವೆ’ ಎಂದು ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ತುಂಬೆ ಮೊಯ್ದೀನ್ ಹೇಳಿದರು. ಶಾರ್ಜಾ ಹೆಲ್ತ್ ಅಥಾರಿಟಿ ಮತ್ತು ಶಾರ್ಜಾ ಹೆಲ್ತ್ಕೇರ್ ಸಿಟಿ ಅಧ್ಯಕ್ಷ ಎಚ್.ಇ.ಡಾ. ಅಬ್ದೆಲಾಝಿಝ್ ಅಲ್ಮ್ಹೇರಿ, ಇಂದಿನ ಜಗತ್ತಿನಲ್ಲಿ ಮಾನಸಿಕ ಆರೋಗ್ಯವು ತುಂಬಾ ಪ್ರಾಮುಖ್ಯತೆ ಹೊಂದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.