ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳು ಇಲ್ಲದಿದ್ದರೆ ನಾವೆಲ್ಲ ಶಿಕ್ಷಣ ವಂಚಿತರಾಗುತ್ತಿದ್ದೆವು. ಈಗ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವುದನ್ನು ಕಂಡಾಗ ಸಂಕಟವಾಗುತ್ತದೆ.
ಬಿ.ಎ.ವಿವೇಕ ರೈ ಸಾಹಿತಿ
‘ಕಾರಂತರು ಶತಮಾನದ ಬೆಳಕು’
‘ಕಾರಂತ ಅನ್ನುವುದು ಕನ್ನಡ ಮಂತ್ರ. ಕನ್ನಡದ ಒಟ್ಟು ವಿದ್ಯಮಾನದಲ್ಲಿ ಸರ್ವಾಂಗೀಣ ಸಿದ್ಧಿ ಮಾಡಿದವರಲ್ಲಿ ಕಾರಂತರ ಹತ್ತಿರ ಬರುವ ಅರ್ಹತೆ ಇರುವವರು ಈಗ ಬಹುಶಃ ಯಾರೂ ಇಲ್ಲ. ಕಾರಂತರು ಕನ್ನಡ ಪ್ರಜ್ಞೆಯ ಶತಮಾನದ ಬೆಳಕು ಮತ್ತು ಧ್ವನಿಯಾಗಿದ್ದವರು. ಕಾರಂತರ ಬಾಳ್ವೆಯೇ ಈಗ ನಮಗೆ ಬೆಳಕು’ ಎಂದು ಕಾರಂತರ ಸ್ಮರಣೆ ಮಾಡಿದ ವಿದ್ವಾಂಸ ಪ್ರಭಾಕರ ಜೋಶಿ ಹೇಳಿದರು.