ಸೋಮವಾರ, ಜೂನ್ 21, 2021
29 °C
ಲಭ್ಯ ಲಸಿಕೆ 2ನೇ ಡೋಸ್‌ ಫಲಾನುಭವಿಗಳಿಗೆ ಆದ್ಯತೆ

ದಕ್ಷಿಣ ಕನ್ನಡದಲ್ಲಿ ಕೋವಿಡ್‌ ಲಸಿಕೆ ಕೊರತೆ: ಮೊದಲ ಡೋಸ್‌ ಈಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೋವಿಡ್‌ ತಡೆ ಲಸಿಕೆಗಳ ಪೂರೈಕೆ ಈಗ ಪರಿಮಿತವಾಗಿದ್ದು, ಎರಡನೇ ಡೋಸ್‌ ಪಡೆಯಲು ಬಾಕಿ ಇರುವವರಿಗಷ್ಟೇ ನೀಡಲಾಗುತ್ತಿದೆ. ಮೊದಲನೇ ಡೋಸ್‌ 18 ವರ್ಷದವರಿಗಷ್ಟೇ ಅಲ್ಲ, 45 ಅಥವಾ 60 ದಾಟಿದವರಿಗೂ ಈಗ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಲಭಿಸಿದ ಮಾಹಿತಿ.

3000 ಡೋಸ್‌ ಕೋವಿಶೀಲ್ಡ್‌ ಲಸಿಕೆ ಲಭ್ಯವಾಗಿತ್ತು. ಇದನ್ನು ಶನಿವಾರ ನೀಡಲಾಗಿದೆ. ಶನಿವಾರ ಒಟ್ಟು 2500ರಷ್ಟು ನೀಡಲಾಗಿದೆ. ಭಾನುವಾರದಿಂದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಎರಡೂ ದಾಸ್ತಾನು ಇಲ್ಲ ಎಂಬ ಮಾಹಿತಿ ನೀಡಲಾಗಿದೆ.

‘ಈಗ ನಾವು ಎರಡನೇ ಡೋಸ್‌ ಪಡೆಯುವ ಅವಧಿ ಪೂರೈಸಿದ ಫಲಾನುಭವಿಗಳಿಗೆ ಲಸಿಕೆ ನೀಡುತ್ತಿದ್ದೇವೆ. ಹೊಸ ಫಲಾನುಭವಿಗಳಿಗೆ ಮೊದಲ ಡೋಸ್‌ ನೀಡಲಾಗುತ್ತಿಲ್ಲ. ಅಷ್ಟು ಲಸಿಕೆ ಪೂರೈಕೆ ಇಲ್ಲ’ ಎಂದು ಲಸಿಕೆ ನೋಡಲ್‌ ಅಧಿಕಾರಿ ಡಾ. ರಾಜೇಶ್‌ ಮಾಹಿತಿ ನೀಡಿದ್ದಾರೆ. ಕೋವಿಶೀಲ್ಡ್‌ ಪೂರ್ಣಪ್ರಮಾಣಧಲ್ಲಿ ಯಾವಾಗ ಲಭಿಸಬಹುದು ಅಥವಾ ಕೋವ್ಯಾಕ್ಸಿನ್‌ ಯಾವಾಗ ಸಿಗಲು ಆರಂಭವಾಗಬಹುದು ಎಂಬ ಸ್ಪಷ್ಟ ಸಂದೇಶ ಇಲಾಖೆಯಿಂದ ಅಧಿಕಾರಿಗಳಿಗೆ ಇನ್ನೂ ಲಭಿಸಿಲ್ಲ.

ಲಸಿಕೆ ವಿವರ: ಜಿಲ್ಲೆಯಲ್ಲಿ ಶನಿವಾರ ಒಟ್ಟು 2168 ಫಲಾನುಭವಿಗಳಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರಿಗೆ  ಮೊದಲ ಡೋಸ್‌ ನೀಡಿಲ್ಲ. 95 ಮಂದಿಗೆ 2ನೇ ಡೋಸ್‌ ಲಸಿಕೆ ನೀಡಲಾಗಿದೆ.  ಮುಂಚೂಣಿ ಕಾರ್ಯಕರ್ತರ ವಿಭಾಗದಲ್ಲಿ ಒಬ್ಬರಿಗೆ ಮಾತ್ರ ಮೊದಲ ಡೋಸ್‌ ನೀಡಲಾಗಿದೆ. ಎರಡನೇ ಡೋಸ್‌ ಅನ್ನು 74 ಮಂದಿಗೆ ನೀಡಲಾಗಿದೆ. 45 ವಷ್ಟ ದಾಟಿದವರ ವಿಭಾಗದಲ್ಲಿ  21 ಮಂದಿಗೆ ಮೊದಲ ಡೋಸ್‌ ಲಸಿಕೆ ಹಾಗೂ 713 ಮಂದಿಗೆ 2ನೇ ಡೋಸ್‌ ಲಸಿಕೆ ನೀಡಲಾಗಿದೆ. 60 ದಾಟಿದ ವಿಭಾಗದಲ್ಲಿ 10 ಮಂಧಿಗೆ ಮೊದಲ ಡೋಸ್‌ ಲಸಿಕೆ ಹಾಗೂ 1254 ಮಂದಿಗೆ 2ನೇ ಡೋಸ್‌ ನೀಡಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಇಂದಿನಿಂದ ಲಸಿಕೆ ಇಲ್ಲ: ಡಿಎಚ್‌ಒ

ಜಿಲ್ಲೆಯಲ್ಲಿ ಕೋವಿಡ್‌ ತಡೆ ಲಸಿಕೆಗಳು ಕೊರತೆ ಇರುವುದರಿಂದ ಭಾನುವಾರದಿಂದ ಲಸಿಕಾ ಶಿಬಿರ ನಡೆಯುವುದಿಲ್ಲ, ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ. ಜಿಲ್ಲೆಗೆ ಸರಬರಾಜು ಆಗಿರುವ ಲಸಿಕೆಗಳನ್ನು ಶನಿವಾರದ ವರೆಗೆ ನೀಡಲಾಗಿದೆ. ಲಸಿಕೆ ಲಭ್ಯವಾದಂತೆ ಶಿಬಿರದ ದಿನಾಂಕವನ್ನು ಫಲಾನುಭವಿಗಳಿಗೆ ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು