ಭಾನುವಾರ, ಮೇ 9, 2021
26 °C

ಬರ್ಕೆ ಠಾಣೆ ಸಿಬ್ಬಂದಿಗೆ ‘ಸ್ಟೀಮ್’, ಕರ್ತವ್ಯಕ್ಕೆ ತೆರಳುವವರ ಸುರಕ್ಷತೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕರ್ತವ್ಯಕ್ಕೆ ತೆರಳುವ ಪೊಲೀಸ್ ಸಿಬ್ಬಂದಿಯ ಆರೋಗ್ಯ ಸುರಕ್ಷತೆ ಕಾಪಾಡಲು ಬರ್ಕೆ ಠಾಣೆಯಲ್ಲಿ ‘ಸ್ಟೀಮ್’ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಗೆಯಾಡುವ ಕೊಳವೆಗಳ ಎದುರು ಕುಳಿತು, ಸರಾಗವಾಗಿ ಉಸಿರಾಟ ನಡೆಸಿ, ನಿತ್ಯದ ಕರ್ತವ್ಯಕ್ಕೆ ತೆರಳುತ್ತಾರೆ ಇಲ್ಲಿನ ಸಿಬ್ಬಂದಿ.

ಕಳೆದ ಮೂರ್ನಾಲ್ಕು ದಿನಗಳಿಂದ ಈ ಪ್ರಯೋಗ ಠಾಣೆಯಲ್ಲಿ ನಡೆಯುತ್ತಿದೆ. ಗ್ಯಾಸ್ ಸಿಲಿಂಡರ್, ಒಲೆ, ಕುಕ್ಕರ್ ಮತ್ತು ಪೈಪ್ ಬಳಸಿ ಈ ವ್ಯವಸ್ಥೆ ರೂಪಿಸಲಾಗಿದೆ. ಠಾಣೆಯಲ್ಲಿ ಸುಮಾರು 40 ಜನ ನೌಕರರು ಇದ್ದಾರೆ. ಇವರೆಲ್ಲ ಪ್ರತಿದಿನ ಕರ್ತವ್ಯಕ್ಕೆ ತೆರಳುವ ಪೂರ್ವದಲ್ಲಿ ಹಾಗೂ ಕರ್ತವ್ಯ ಮುಗಿಸಿ ಬಂದ ಮೇಲೆ, ಸ್ಟೀಮ್‌ ಎದುರು ಕೆಲಹೊತ್ತು ಕುಳಿತು ಮನೆಗೆ ತೆರಳುತ್ತಾರೆ.

‘ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ತೆರಳುವ ಪೊಲೀಸರ ಸುರಕ್ಷತೆಯೂ ಮುಖ್ಯ. ಕೆಲವು ಆಯುರ್ವೇದ ತಜ್ಞರು, ಕೋವಿಡ್‌ನಿಂದ ದೂರವಿರಲು ಸ್ಟೀಮ್ ಸಹಕಾರಿ ಎಂದು ಸಲಹೆ ನೀಡಿದ್ದರು. ಅದನ್ನು ಪರಿಗಣಿಸಿ, ಸ್ಟೀಮ್ ವ್ಯವಸ್ಥೆಗೊಳಿಸಿದ್ದೇವೆ. ಜತೆಗೆ ಗಾರ್ಗಲ್ ಮಾಡಲು ಉಪ್ಪು ನೀರು, ಕುಡಿಯಲು ಗಿಡಮೂಲಿಕೆ ಕಷಾಯ, ಬಿಸಿ ನೀರು ಇಡಲಾಗಿದೆ. ನಮ್ಮ ಸಿಬ್ಬಂದಿ ಮಾತ್ರವಲ್ಲ, ಠಾಣೆಗೆ ಬರುವ ದೂರುದಾರರು ಸಹ ಸ್ಟೀಮ್‌ ವ್ಯವಸ್ಥೆಯ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಲಾಗಿದೆ’ ಎನ್ನುತ್ತಾರೆ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊಣಕಟ್ಟಿ.

‘ಸ್ಟೀಮ್‌ ಎದುರು 3–4 ನಿಮಿಷ ಕುಳಿತು ಉಸಿರು ಎಳೆದುಕೊಂಡರೆ, ನಿರಾಳವಾದಂತೆ ಅನ್ನಿಸುತ್ತದೆ. ಠಾಣೆಯ ಸಿಬ್ಬಂದಿ ಖುಷಿಯಿಂದ ಸ್ಟೀಮ್ ಮಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು