ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರಹ್ಮಣ್ಯ: ಕುಮಾರಧಾರ ಸ್ನಾನಘಟ್ಟ ಮುಳುಗಡೆ

Last Updated 7 ಆಗಸ್ಟ್ 2021, 2:54 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಕುಮಾರಧಾರ ನದಿಯಲ್ಲಿ ಭಾರಿ ಪ್ರವಾಹ ಹರಿದು ಸ್ನಾನಘಟ್ಟ ಮುಳುಗಡೆಯಾಗಿದೆ.

ಕುಮಾರಧಾರದ ಉಪನದಿಯಾದ ದರ್ಪಣತೀರ್ಥವು ತುಂಬಿ ಹರಿದು ದರ್ಪಣತೀರ್ಥ ಸೇತುವೆಯು ಮುಳು ಗಡೆಗೊಂಡಿತ್ತು. ಇದರಿಂದಾಗಿ ಸುಬ್ರ ಹ್ಮಣ್ಯ- ಪುತ್ತೂರು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕುಕ್ಕೆಯ ಪರಿಸರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನದಿ ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ.

ಸ್ನಾನಘಟ್ಟ ಜಲಾವೃತ್ತ: ಮಲೆನಾಡು ಪ್ರದೇಶದಲ್ಲಿ ಸುರಿದ ಮಳೆಯ ಪರಿಣಾಮ ಕುಮಾರಧಾರ ನದಿಯು ಉಕ್ಕಿ ಹರಿಯಿತು. ಇದರಿಂದಾಗಿ ಕುಮಾರಧಾರ ಸ್ನಾನಘಟ್ಟವು ಮುಂಜಾನೆ ಮುಳುಗಡೆಗೊಂಡಿತ್ತು. ಸ್ನಾನಘಟ್ಟದಲ್ಲಿ ನಿರ್ಮಿತವಾಗಿದ್ದ ಶೌಚಾಲಯ ನೀರಿನಿಂದ ಆವೃತ ಗೊಂಡಿತ್ತು. ಅಲ್ಲದೆ, ಸ್ನಾನಘಟ್ಟ ದಲ್ಲಿದ್ದ ದೇವರ ಅವಭೃತ ಕಟ್ಟೆಯು ಭಾಗಶಃ ಮುಳುಗಡೆಗೊಂಡಿತ್ತು. ಕುಮಾರಧಾರ ನದಿಯಲ್ಲಿ ಪ್ರವಾಹ ಅಧಿಕಗೊಂಡು ಕುಲ್ಕುಂದ, ಪರ್ವತಮುಖಿ ಪರಿಸರದಲ್ಲಿ ಗದ್ದೆಗಳಿಗೆ ನೀರು ನುಗ್ಗಿತ್ತು.

ಯಡಕುಮೇರಿ ಸಮೀಪ ರೈಲ್ವೆ ಹಳಿಗೆ ಬಂಡೆ ಉರುಳಿದ ಪರಿಣಾಮ ವಾಗಿ ಸುಮಾರು ಅರ್ಧ ಗಂಟೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT