ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಪ್ರಿಂಟಿಂಗ್ ಪ್ರೆಸ್ ಮಾಲೀಕ ಆತ್ಮಹತ್ಯೆ

Published 17 ಆಗಸ್ಟ್ 2023, 14:51 IST
Last Updated 17 ಆಗಸ್ಟ್ 2023, 14:51 IST
ಅಕ್ಷರ ಗಾತ್ರ

ಪುತ್ತೂರು: ಅಡ್ಯನಡ್ಕದಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದ ಪುತ್ತೂರು ತಾಲ್ಲೂಕಿನ ಕಬಕ ಗ್ರಾಮದ ಪೋಳ್ಯ ನಿವಾಸಿ ಪದ್ಮಯ್ಯ ಗೌಡ (50) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪುತ್ತೂರಿನ ಕೆನರಾ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಪದ್ಮಯ್ಯ ಗೌಡ ಅವರು ಕೆಲ ವರ್ಷದ ಹಿಂದೆ ಅಡ್ಯನಡ್ಕದಲ್ಲಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಿ, ಅಲ್ಲೇ ಬಾಡಿಗೆ ಮನೆಯೊಂದರಲ್ಲಿ ವಾಸ್ಯವ್ಯವಿದ್ದುಕೊಂಡು ವಾರಕ್ಕೊಮ್ಮೆ ಪೋಳ್ಯದಲ್ಲಿರುವ ಮನೆಗೆ ಹೋಗುತ್ತಿದ್ದರು.

ಸೋಮವಾರ ಪದ್ಮಯ್ಯ ಗೌಡ ಅವರ ಸ್ಕೂಟರ್ ಪೋಳ್ಯ ಮನೆಗೆ ಹೋಗುವ ರಸ್ತೆ ಬದಿಯಲ್ಲಿ ಕಂಡು ಬಂದಿತ್ತು. ಅವರ ಮೊಬೈಲಿಗೆ ಕರೆ ಮಾಡಿದಾಗ ಪೋನ್ ರಿಂಗಣಿಸುತ್ತಿತ್ತು. ಇದರ ಜಾಡು ಹಿಡಿದು ಹುಡುಕಾಡಿದಾಗ ಮನೆ ಸಮೀಪದ ತೋಟದ ಬಾವಿಯ ಬಳಿ ಪದ್ಮನಾಭ ಗೌಡ ಅವರ ಬಟ್ಟೆ ಪತ್ತೆಯಾಗಿತ್ತು. ಬಾವಿಯಲ್ಲಿ ಹುಡುಕಾಡಿದಾಗ ಶವ ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT