ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ಐಟಿಕೆ ಬೀಚ್‌ನಲ್ಲಿ ಒಂದೇ ಕುಟುಂಬದ ಇಬ್ಬರು ಯುವತಿಯರು ಸಮುದ್ರಪಾಲಾಗಿ ಮೃತಪಟ್ಟಿದ್ದಾರೆ.

ಮಂಗಳೂರು ಶಕ್ತಿನಗರ ನಿವಾಸಿ ವೈಷ್ಣವಿ (21) ಹಾಗೂ ತ್ರಿಶಾ (17) ಮೃತರು. ವೈಷ್ಣವಿ ಅವರ ತಂದೆ ವೆಂಕಟೇಶ್ ಎಂಬುವರನ್ನು ರಕ್ಷಣೆ ಮಾಡಲಾಗಿದೆ. ಮೃತರು ಅಣ್ಣತಮ್ಮಂದಿರ ಮಕ್ಕಳು.

ವೆಂಕಟೇಶ್ ಅವರ ಮಾವ ಈಚೆಗೆ ನಿಧನರಾಗಿದ್ದು, ತಿಥಿಯ ಪಿಂಡ ಪ್ರದಾನ ಮಾಡಲೆಂದು ಕುಟುಂಬಿಕರು ಎನ್‌ಐಟಿಕೆ ಸಮುದ್ರ ಕಿನಾರೆಗೆ ಬಂದಿದ್ದರು. ಪಿಂಡ ಪ್ರದಾನ ಮಾಡಿದ ಬಳಿಕ ವೆಂಕಟೇಶ್, ಅವರ ಪುತ್ರಿ ವೈಷ್ಣವಿ ಹಾಗೂ ತಮ್ಮನ ಪುತ್ರಿ ತ್ರಿಶಾ ಸಮುದ್ರಕ್ಕೆ ಇಳಿದಿದ್ದಾರೆ. ಈ ಸಂದರ್ಭ ಬಂದ ಬೃಹತ್ ಅಲೆಗೆ ಸಿಲುಕಿ ಮೂವರು ಸಮುದ್ರಪಾಲಾದರು.

ಸಮೀಪದಲ್ಲಿದ್ದ ಹೋಮ್ ಗಾರ್ಡ್ ಪ್ರಶಾಂತ್ ಮತ್ತು ಸ್ಥಳೀಯ ಯುವಕರು ಧಾವಿಸಿ, ಸಮುದ್ರಪಾಲಾದವರನ್ನು ದಡಕ್ಕೆ ಕರೆ ತಂದಿದ್ದಾರೆ. ಆದರೆ, ತ್ರಿಶಾ ಹಾಗೂ ವೈಷ್ಣವಿ ಮೃತಪಟ್ಟಿದ್ದಾರೆ. ವೆಂಕಟೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈಷ್ಣವಿಯು ನಗರದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ, ತ್ರಿಶಾ ಬೆಂಗಳೂರಿನ ಗುರುಕುಲ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ: ಸಿಐಡಿ ತನಿಖೆ ಆರಂಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.