ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಿಯಡ್ಕ: ದುರಸ್ತಿಯಾಗದ ಕುಂಟಾರು ತೂಗುಸೇತುವೆ

Published 4 ಮಾರ್ಚ್ 2024, 13:47 IST
Last Updated 4 ಮಾರ್ಚ್ 2024, 13:47 IST
ಅಕ್ಷರ ಗಾತ್ರ

ಬದಿಯಡ್ಕ: ಮುಳ್ಳೇರಿಯ ಸಮೀಪದ ಕುಂಟಾರಿನಲ್ಲಿ ಪಯಸ್ವಿನಿ ಹೊಳೆಗೆ ನಿರ್ಮಿಸಿದ ತೂಗುಸೇತುವೆಯ ಹಲಗೆ ಶಿಥಿಲಗೊಂಡಿದ್ದು, ರಂದ್ರಗಳು ಉಂಟಾಗಿವೆ.

ಕಾರಡ್ಕ ಹಾಗೂ ದೇಲಂಪಾಡಿ ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸುವ ಕುಂಟಾರು ತೂಗುಸೇತುವೆ ಪ್ರದೇಶದಲ್ಲಿ ಕಾಂಕ್ರೀಟ್‌ ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆ ಈಡೇರಿಲ್ಲ. 2007ರಲ್ಲಿ ಸುಮಾರು ₹ 11 ಲಕ್ಷ ವೆಚ್ಚದಲ್ಲಿ ಈ ತೂಗುಸೇತುವೆ ನಿರ್ಮಿಸಲಾಗಿತ್ತು.

ದೇಲಂಪಾಡಿ ಗ್ರಾಮ ಪಂಚಾಯಿತಿಯ ಚರ್ಲಕಾಯಿ, ಮಣಿಯೂರು, ಮೊಗೆರು, ಮಾಟೆಬಯಲು ಪ್ರದೇಶಗಳಿಂದ ಪ್ರತಿ ದಿನ ಶಾಲೆ ಮಕ್ಕಳು ಹಾಗೂ ಸಾರ್ವಜನಿಕರು ಈ ಸೇತುವೆ ಮೇಲೆಯೇ ಸಾಗಬೇಕು. ಈ ಪ್ರದೇಶದಲ್ಲಿ ಶಾಶ್ವತವಾದ ಕಾಂಕ್ರೀಟ್‌ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT