ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಮೂವರು ಗುಣಮುಖ

ಅಜ್ಜ–ಮೊಮ್ಮಗಳಿಗೆ ನಿವಾಸಿಗಳಿಂದ ಚಪ್ಪಾಳೆಯ ಸ್ವಾಗತ
Last Updated 20 ಮೇ 2020, 16:25 IST
ಅಕ್ಷರ ಗಾತ್ರ

ಮಂಗಳೂರು: ಒಂದೆಡೆ ದಿನದಿಂದ ದಿನಕ್ಕೆ ಕೋವಿಡ್–19 ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಮಧ್ಯೆ ಬುಧವಾರ ಕೋವಿಡ್–19 ಸೋಂಕು ತಗಲಿದ್ದ ಮೂವರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೋಳೂರಿನ 62 ವರ್ಷದ ವೃದ್ಧ, 11 ವರ್ಷದ ಮೊಮ್ಮಗಳು ಹಾಗೂ ಬಂಟ್ವಾಳದ 16 ವರ್ಷದ ಬಾಲಕಿ ವೆನ್ಲಾಕ್‌ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಪಾಲಿಕೆ ವ್ಯಾಪ್ತಿಯ ಬೋಳೂರಿನ 58ರ ವರ್ಷದ ಮಹಿಳೆಗೆ ಏ.28 ರಂದು ಸೋಂಕು ದೃಢಗೊಂಡಿತ್ತು. ಇದೇ 13ರಂದು ಈ ಮಹಿಳೆ ಮೃತಪಟ್ಟಿದ್ದರು. ಈ ಮಹಿಳೆಯ 62 ವರ್ಷ ಪತಿಗೆ ಏ.29 ರಂದು ಸೋಂಕು ದೃಢಗೊಂಡಿತ್ತು. ಬಳಿಕ ಇದೇ 5ರಂದು ಈ ದಂಪತಿಯ 51 ವರ್ಷದ ಅಳಿಯನಿಗೆ, 6 ರಂದು ಈ ದಂಪತಿಯ 38 ವರ್ಷದ ಮಗಳಿಗೆ ಮತ್ತು 11 ವರ್ಷದ ಮೊಮ್ಮಗಳಿಗೆ ಸೋಂಕು ದೃಢಪಟ್ಟಿತ್ತು.

ಇದೀಗ ಅಜ್ಜ ಮತ್ತು ಮೊಮ್ಮಗಳು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ, ಮಗಳು ಮತ್ತು ಅಳಿಯ ಇನ್ನೂ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಜ್ಜ ಮತ್ತು ಮೊಮ್ಮಗಳನ್ನು ತಮ್ಮ ಮನೆಗೆ ಹಿಂತಿರುಗುತ್ತಿದ್ದಂತೆ ಪಾಲಿಕೆಯ ಸದಸ್ಯ ಜಗದೀಶ್‌ ಶೆಟ್ಟಿ ಸ್ವಾಗತಿಸಿದರು. ಯಾವುದೇ ಸಹಾಯ ಬೇಕಿದ್ದಲ್ಲಿ ತಮ್ಮನ್ನು ಸಂಪರ್ಕಿಸಿದಲ್ಲಿ ತುರ್ತಾಗಿ ಒದಗಿಸುವ ಭರವಸೆ ನೀಡಿದರು. ಬೋಳೂರಿನ ನಿವಾಸಿಗಳು ಅವರನ್ನು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿ, ಮಾನಸಿಕ ಸ್ಥೈರ್ಯ ತುಂಬಿದರು. ಇದೇ ವೇಳೆ ಅವರು ವಾಸವಾಗಿದ್ದ ಮನೆಯನ್ನು ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾಯಿತು.

ಇನ್ನೊಂದೆಡೆ ಬಂಟ್ವಾಳ ಪೇಟೆಯ 16 ವರ್ಷದ ಬಾಲಕಿ ಸಂಪೂರ್ಣ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಬಾಲಕಿಗೆ ಮೇ 6 ರಂದು ಸೋಂಕು ದೃಢವಾಗಿತ್ತು.

27 ಮಂದಿ ಆರೋಗ್ಯ ಸ್ಥಿರ: ವೆನ್ಲಾಕ್ ಆಸ್ಪತ್ರೆಯಲ್ಲಿ ಒಟ್ಟು 30 ರೋಗಿಗಳು ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 27 ರೋಗಿಗಳ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ.

ಸೋಂಕಿತ 76 ವರ್ಷದ ಪುರುಷ ಮಧುಮೇಹ, ರಕ್ತದೊತ್ತಡ, ಹೃದಯದ ತೊಂದರೆ ಹಾಗೂ ಕಾಲಿನ ಸೋಂಕಿನಿಂದ ಬಳಲುತ್ತಿದ್ದಾರೆ. 68 ವರ್ಷದ ಮಹಿಳೆ ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. 40 ವರ್ಷದ ಮಹಿಳೆಗೆ ಮಧುಮೇಹ, ಮೂತ್ರದ ಸೋಂಕು ಹಾಗೂ ಉಸಿರಾಟದ ತೊಂದರೆ ಇದ್ದು, ಈ ಮೂವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT