ಪುತ್ತೂರು: ಇಲ್ಲಿನ ಐಸಿಎಆರ್- ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಶನಿವಾರ ಪಿಎಂ-ಕಿಸಾನ್ ಉತ್ಸವದ ಭಾಗವಾಗಿ ‘ಗೇರಿನ ವೈಜ್ಞಾನಿಕ ಕೃಷಿ’ ಕುರಿತ ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಬಳಿಕ ಪರಿಶಿಷ್ಟ ಪಂಗಡದ ರೈತರಿಗೆ ಸಸಿ ವಿತರಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ವಾರಾಣಸಿಯಿಂದ ಪಿಎಂ-ಕಿಸಾನ್ 20ನೇ ಹಣಕಾಸು ಕಂತನ್ನು ಬಿಡುಗಡೆ ಮಾಡಿದ್ದು, ಆ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಯಿತು.

ಪುತ್ತೂರಿನ ಐಸಿಎಆರ್-ಡಿಸಿಆರ್ನ ಪ್ರಧಾನ ನಿರ್ದೇಶಕ ಟಿ.ವಿ.ರವಿಪ್ರಸಾದ್ ಮಾತನಾಡಿ, ದೇಶಕ್ಕೆ ಹೆಚ್ಚು ಮಹತ್ವಾಕಾಂಕ್ಷೆಯ ಆರ್ಥಿಕ ಗುರಿ ಸಾಧಿಸಲು ರೈತರ ಪಾಲ್ಗೊಳ್ಳುವಿಕೆ ಮುಖ್ಯ ಎಂದರು.

ಗೇರು ಕೃಷಿಯ ಬಗ್ಗೆ ರೈತರಿಗೆ ಶಿಕ್ಷಣ ನೀಡುವ ಕುರಿತು ಚರ್ಚೆ ನಡೆಸಿದರು.

ಗೇರು ಕೃಷಿ ಬಗ್ಗೆ ಅರಿವು ಮೂಡಿಸಲು ತಾಂತ್ರಿಕ ತರಬೇತಿ ನಡೆಯಿತು. ಸಸ್ಯ ತಳಿ ಅಭಿವೃದ್ಧಿ ವಿಭಾಗದ ಹಿರಿಯ ವಿಜ್ಞಾನಿ ಈರದಾಸಪ್ಪ ಅವರು ಮಾಹಿತಿ ನೀಡಿದರು.

ಸಂಬಾರ, ತೋಟ, ಔಷಧೀಯ ಮತ್ತು ಆರೊಮ್ಯಾಟಿಕ್ಸ್ ಸಸ್ಯಗಳು ವಿಭಾಗದ ವಿಜ್ಞಾನಿ ಮಂಜೇಶ್ ಜಿ. ಎನ್., ಕೃಷಿ ಕೀಟಶಾಸ್ತ್ರ ವಿಭಾಗದ ಹಿರಿಯ ವಿಜ್ಞಾನಿ ವನಿತಾ ಕೆ., ಸಸ್ಯರೋಗ ಶಾಸ್ತ್ರ ವಿಭಾಗದ ಹಿರಿಯ ವಿಜ್ಞಾನಿ ರಾಜಶೇಖರ ಎಚ್. ಉಪನ್ಯಾಸ ನೀಡಿದರು.

ಕೃಷಿ ಮತ್ತು ನಿರ್ವಹಣೆ ಸಮಯದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿಜ್ಞಾನಿಗಳು ಸಂವಾದ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.