ಮಂಗಳೂರು: ವೇದಘೋಷ, ರಾಷ್ಟ್ರಭಕ್ತಿ ಉಕ್ಕಸುವ ಗೀತೆಗಳ ಗಾಯನದ ಜೊತೆ ಉಡುಪಿ ಶೀರೂರು ಮಠದ ವೇದವರ್ಧನತೀರ್ಥ ಶ್ರೀಗಳನ್ನು ನಾಣ್ಯಗಳಿಂದ ತುಲಾಭಾರ ಮಾಡಿ ಭಕ್ತರು ಸಂಭ್ರಮಿಸಿದರು.

ಜ.18ರಂದು ನಡೆಯುವ ಪರ್ಯಾಯದ ನಂತರ ಕೃಷ್ಣಪೂಜೆಯ ಕೈಂಕರ್ಯ ಮಾಡಲಿರುವ ಶ್ರೀಗಳ ನಗರ ಸಂಚಾರದ ಅಂಗವಾಗಿ ನಗರದ ಮಲ್ಲಿಕಾ ಬಡಾವಣೆಯ ‘ಮಂಜು ಪ್ರಸಾದ’ದಲ್ಲಿ ಪರ್ಯಾಯ ಸಮಿತಿಯ ಮಂಗಳೂರು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಕ್ತಿ ಭಾವ ಮೇಳೈಸಿತು.

ಸ್ವಾಮೀಜಿ ತುಲಾಭಾರ ನಡೆಯುವ ಸ್ಥಳಕ್ಕೆ ಬರುತ್ತಿದ್ದಂತೆ ವಂದೇಮಾತರಂ ಗೀತೆ ಮೊಳಗಿಸಿದ ಭಕ್ತರು ವಾತಾವರಣವನ್ನು ಪ್ರಫುಲ್ಲಗೊಳಿಸಿದರು. ನಾಣ್ಯಗಳನ್ನು ಸಮರ್ಪಿಸಲು ಆರಂಭಿಸುತ್ತಿದ್ದಂತೆ ‘ವಿಠ್ಠಲ–ವಿಠ್ಠಲ ಪಾಂಡುರಂಗ’ ಹಾಡು ಮಹಿಳೆಯರ ಕಡೆಯಿಂದ ತೇಲಿಬಂತು. ಸ್ವಾಮೀಜಿ ಮುಂದೆ ಬಂದು ‘ತುಲಾ’ದ ಹತ್ತಿರ ನಿಂತುಕೊಳ್ಳುತ್ತಿದ್ದಂತೆ ‘ಆನಂದಮಯಗೆ ಚಿನ್ಮಯಗೆ...’ ಎಂಬ ಹಾಡು ಮುದ ನೀಡಿತು.

ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಸುಚೇತಾ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್, ಕಲಾವಿದ ಕದ್ರಿ ನವನೀತ ಶೆಟ್ಟಿ, ಮಹಾನಗರಪಾಲಿಕೆಯ ನಿಕಟಪೂರ್ವ ಸದಸ್ಯರಾದ ಶಕೀಲಾ ಕಾವ, ಮನೋಹರ ಶೆಟ್ಟಿ, ಕರ್ಣಾಟಕ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ
ಶೀರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ, ಪ್ರಮುಖರಾದ ಎ.ಸಿ.ಭಂಡಾರಿ, ಎಂ.ಬಿ ಪುರಾಣಿಕ್, ಸುಧಾಕರ ಪೇಜಾವರ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.