ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ 650 ಅರ್ಜಿ ಸಲ್ಲಿಕೆ : ಕತ್ತಲ್‍ಸಾರ್

ಕಲಾವಿದರಿಗೆ ಕೋವಿಡ್‌ ಪ್ಯಾಕೇಜ್‌: ತುಳು ಅಕಾಡೆಮಿ ಸಹಕಾರ
Last Updated 5 ಜೂನ್ 2021, 13:25 IST
ಅಕ್ಷರ ಗಾತ್ರ

ಮಂಗಳೂರು: ‘ಕೋವಿಡ್ ತಡೆ ನಿರ್ಬಂಧದಿಂದ ಆರ್ಥಿಕ ಸಂಕಷ್ಟದಲ್ಲಿ ರುವ ಕಲಾವಿದರಿಗೆ ಸರ್ಕಾರದಿಂದ ಸಿಗಲಿರುವ ಆರ್ಥಿಕ ನೆರವಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕರ್ನಾಟಕ ತುಳು ಅಕಾಡೆಮಿ ಸಹಕಾರ ನೀಡುತ್ತಿದೆ. ಒಂದು ವಾರದಲ್ಲಿ 650 ಅರ್ಜಿಗಳು ಇಲಾಖೆಗೆ ಸಲ್ಲಿಕೆಯಾಗಿವೆ’ ಎಂದು ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್ ತಿಳಿಸಿದರು.

ಅಕಾಡೆಮಿಯಲ್ಲಿ ಕಾರ್ಯಾಲಯದಲ್ಲಿ ವಿಶೇಷ ತಂಡದೊಂದಿಗೆ ಈ ಕಾರ್ಯವನ್ನು ನಡೆಸಲಾಗುತ್ತಿದೆ. ತಂಡದಲ್ಲಿ ಅಕಾಡೆಮಿಯ ಸದಸ್ಯರಾದ ನರೇಂದ್ರ ಕೆರೆಕಾಡು, ಚೇತಕ್ ಪೂಜಾರಿ, ನಿಟ್ಟೆ ಶಶಿಧರ ಶೆಟ್ಟಿ, ನಾಗೇಶ್ ಕುಲಾಲ್ ಕುಳಾಯಿ, ವಿವಿಧ ಸಂಘಟನೆಯ ಪ್ರಮುಖರಾದ ಡಾ.ರವೀಶ್ ಪರವ, ನಾಗರಾಜ್ ಭಟ್, ಕಾರ್ತಿಕ್, ಮುಖೇಶ್ ಗಂಧಕಾಡು ಹಾಗೂ ಸಿಬ್ಬಂದಿ ಸಹಕರಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಅಕಾಡೆಮಿಯ ಸದಸ್ಯರಾದ ಡಾ.ಆಕಾಶ್ ರಾಜ್ ಜೈನ್, ತಾರಾ ಉಮೇಶ್ ಆಚಾರ್ಯ ನಿರ್ವಹಣೆ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ಸದಸ್ಯೆ ಕಾಂತಿ ಶೆಟ್ಟಿ ಇದರ ನೇತೃತ್ವ ವಹಿಸಿದ್ದಾರೆ, ತುಳುನಾಡಿನ ದೈವಾರಾಧನೆ, ತುಳು ನಾಟಕ ರಂಗಕಲಾವಿದರು, ಯಕ್ಷಗಾನ, ವಿವಿಧ ವಾದ್ಯ ಪರಿಕರಗಳ ಸಹಿತ ಸಂಗೀತ ಕಲಾವಿದರು ಇದರ ಪ್ರಯೋಜನವನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT