ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕಾಲ ಕೋಂದೆ’ ತುಳು ಕ್ಯಾಲೆಂಡರ್‌ ಬಿಡುಗಡೆ

Published 30 ಡಿಸೆಂಬರ್ 2023, 7:24 IST
Last Updated 30 ಡಿಸೆಂಬರ್ 2023, 7:24 IST
ಅಕ್ಷರ ಗಾತ್ರ

ಮಂಗಳೂರು: ತುಳುನಾಡಿನ ಸರ್ವ ಧರ್ಮೀಯರ ಹಬ್ಬ, ಆಚರಣೆ ಹಾಗೂ ತುಳುನಾಡಿನ ಆಯನ ಜಾತ್ರೆ ಮೊದಲಾದ ವಿಶೇಷ ದಿನಗಳ ಮಾಹಿತಿ ನೀಡುವ ‘ಕಾಲ ಕೋಂದೆ’ ತುಳು ಕ್ಯಾಲೆಂಡರ್‌ ಅನ್ನು ಅಸೈಗೋಳಿಯ ಮೀಸಲು ಪೊಲೀಸ್ ಪಡೆಯ ಕಮಾಂಡೆಂಟ್ ಆಫ್ ಪೊಲೀಸ್ ಬಿ.ಎಂ. ಪ್ರಸಾದ್ ಬಿಡುಗಡೆಗೊಳಿಸಿದರು.

ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಮತ್ತು ರಾಷ್ಟ್ರೀಯ ತುಳು ಅಕಾಡೆಮಿ ಆಶ್ರಯದಲ್ಲಿ ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಳು ಹಬ್ಬಗಳು, ತುಳುನಾಡಿನ ವಿಶೇಷತೆ ಇರುವ ಕ್ಯಾಲೆಂಡರ್ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ. ತುಳುವೇತರ ಕನ್ನಡಿಗರು ಕೂಡ ತುಳುವಿನ ವಿಶೇಷತೆಗಳ ಬಗ್ಗೆ ತಿಳಿಯಲು ಇದು ಸಹಕಾರಿಯಾಗಿದೆ’ ಎಂದರು.

‘ನಮ್ಮ ಕುಡ್ಲ’ ಚಾನೆಲ್‌ನ ನಿರ್ದೇಶಕ ಲೀಲಾಕ್ಷ ಕರ್ಕೇರ ಅವರು ತುಳು ಲಿಪಿಯ ‘ಪೊರ್ಲು’ ಚಾರ್ಟ್ ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ‘ಕಾಲ ಕೋಂದೆ’ ಕ್ಯಾಲೆಂಡರ್ ಹಾಗೂ ತುಳುವಿನ ಪ್ರಥಮ ಗಣಕೀಕೃತ ಲಿಪಿ ತೌಳವದ ವಿನ್ಯಾಸಕಾರ ಪ್ರವೀಣ್ ರಾಜ್ ಎಸ್. ರಾವ್ ಮಾತನಾಡಿ, ‘ತುಳುವರ ಸಿಂಗೊಡೆಯಿಂದ ಪ್ರಾರಂಭವಾಗಿ ಸಂಕ್ರಾತಿ, ನಕ್ಷತ್ರ ಎಲ್ಲ ವಿವರಗಳನ್ನು ಕ್ಯಾಲೆಂಡರ್‌ನಲ್ಲಿ ಗುರುತಿಸಲಾಗಿದೆ’ ಎಂದರು. ವಿನ್ಯಾಸಕ್ಕೆ ಸಹಕರಿಸಿದ ಪ್ರದೀಪ್ ಡಿಸೋಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT