ಭಾನುವಾರ, ಜನವರಿ 24, 2021
18 °C

ತುಳು ಲಿಪಿ ಕಾರ್ಯಾಗಾರ: ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ತುಳುಲಿಪಿ ಕಾರ್ಯಾಗಾರದಲ್ಲಿ ಉತ್ತಮ ಅಂಕ ಪಡೆದವರನ್ನು ಸನ್ಮಾನಿಸುವ ಕಾರ್ಯಕ್ರಮವು ಈಚೆಗೆ ಮಲ್ಪೆಯ ನಾರಾಯಣಗುರು ಸಮುದಾಯ ಭವನದಲ್ಲಿ ನಡೆಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ ಹಾಗೂ ಬಿಲ್ಲವ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. 

ತುಳುಲಿಪಿ ಶಿಕ್ಷಕರಾದ ಉಷಾ ಎನ್‌. ಪೂಜಾರಿ, ರಾಜೇಶ್ ತುಳುವೆ, ಉಜ್ವಲ ಎನ್. ಪೂಜಾರಿ, ದೀಪಶ್ರೀ ಪೂಜಾರಿ, ವಿಜಯ್‌ ವಿಕ್ಕಿ ಅಮೀನ್ ಕಾರ್ಯಕ್ರಮ ನಡೆಸಿಕೊಟ್ಟರು.

ಅಕಾಡೆಮಿ ಸದಸ್ಯ ಆಕಾಶ್‌ ರಾಜ್‌ ಜೈನ್ ಮಾತನಾಡಿ, ‘ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆ ಮಾಡುವುದು ಹಾಗೂ ತುಳು ಲಿಪಿ ಯುನಿಕೋಡ್‌ಗಾಗಿ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ’ ಎಂದರು.

ತುಳುಲಿಪಿ ಸಂಶೋಧಕ ಪುಂಡೂರು ವೆಂಕಟರಾಜ ಪುಣಿಚಿತ್ತಾಯ ಅವರ ಬಗ್ಗೆ ಮಾಹಿತಿ ನೀಡಲಾಯಿತು.

ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಜತ್ತನ್‌ ಅಧ್ಯಕ್ಷತೆ ವಹಿಸಿದ್ದರು. ಜೈ ತುಳುನಾಡ್ ಅಧ್ಯಕ್ಷ ಸುದರ್ಶನ್ ಸುರತ್ಕಲ್, ಪ್ರಧಾನ ಕಾರ್ಯದರ್ಶಿ ಸದಾಶಿವ ಮುದ್ರಾಡಿ, ಮಲ್ಪೆ ಬಿಲ್ಲವ ಸಂಘದ ಸುನೀಲ್ ದಾಸ್, ಸತೀಶ್‌ ಕೊಡವೂರು ನಾರಾಯಣಗುರು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಘುರಾಮ ಸುವರ್ಣ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಜಗದೀಶ್ ಬಂಗೇರ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.