ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಳ್ಳಾ‌ಲದ‌ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

Published 8 ಜುಲೈ 2024, 6:25 IST
Last Updated 8 ಜುಲೈ 2024, 6:25 IST
ಅಕ್ಷರ ಗಾತ್ರ

ಉಳ್ಳಾಲ (ದಕ್ಷಿಣ ಕನ್ನಡ): ಉಳ್ಳಾ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ (65)ಅವರು ಕೇರಳದ ಎಟ್ಟಿಕ್ಕುಳಂನಲ್ಲಿ ಸೋಮವಾರ ನಿಧನರಾದರು.

ಸಮಸ್ತ ಕೇರಳ ಜಮೀಯತುಲ್ ಉಲಾಮಾ ಕೌನ್ಸಿಲ್ ನ ಸದಸ್ಯರಾಗಿದ್ದ ಅವರು, ಕಾಸರಗೋಡಿನ ಜಾಮಿಯಾ ಸಅದಿಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.

ಅವರ ಪಾರ್ಥೀವ ಶರೀರವು ಎಟ್ಟಿಕ್ಕುಳಂ ಅವರ ನಿವಾಸದಲ್ಲಿದೆ. ಸಂಜೆ 5 ಗಂಟೆಗೆ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯರ್ ಅವರ ನೇತೃತ್ವದಲ್ಲಿ ಪುತ್ತೂರಿನ ಕೂರತ್‌ನಲ್ಲಿ ಅವರಿಗೆ ವಿಶೇಷ ಪ್ರಾರ್ಥನೆ ನೆರವೇರಲಿದೆ.

ಬಳಿಕ ರಾತ್ರಿ 9 ಗಂಟೆಗೆ ಕೂರತ್ ಮಸೀದಿ ವಠಾರದಲ್ಲಿ ಅವರ ದಫನ್ ಕಾರ್ಯ ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಅವರ ತಂದೆ ಮರ್ಹೂಂ ತಾಜುಲ್ ಉಲಮಾ ಸಯ್ಯದ್ ಅಬ್ದುಲ್ ರಹಿಮಾನ್ ಕುಂಞಿ ಕೋಯ ತಂಙಳ್ ಉಳ್ಳಾಲ ಖಾಝಿ ಆಗಿದ್ದ ಸಂದರ್ಭದಲ್ಲಿ ಅವರು ಸಹಾಯಕ ಖಾಝಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

2014ರಲ್ಲಿ ತಾಜುಲ್ ಉಲಮಾ ಸಯ್ಯದ್ ಅಬ್ದುಲ್ ರಹಿಮಾನ್ ಕುಂಞಿ ಕೋಯ ತಂಙಳ್ ನಿಧನ ಹೊಂದಿದ್ದು, ಇದರ ಬಳಿಕ ಫಝಲ್ ಕೋಯಮ್ಮ ತಂಙಳ್ ಖಾಝಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಅಲ್ಲದೇ ಕೆಲವು ವರ್ಷಗಳಿಂದ ಪುತ್ತೂರು ತಾಲೂಕಿನ ಕೂರ ಎಂಬಲ್ಲಿ ಫಝಲ್ ಎಜುಕೇಶನಲ್ ಸೆಂಟರ್ ಸಂಸ್ಥೆ ನಡಸುತ್ತಿದ್ದರು.

ಅವರ ಆರೋಗ್ಯದಲ್ಲಿ ಏರು ಪೇರು ಕಂಡು ಕೇರಳದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ಆಪ್ತ ಮೂಲ ಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT