ಉಳ್ಳಾಲ: ಮೂಲ ಸವಲತ್ತು, ಸರಿಯಾದ ಸೇವಾ ಸೌಲಭ್ಯಗಳು ನೀಡದೆ ಸುಮಾರು 17 ಆ್ಯಪ್‌ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಹೇರಿರುವ ಒತ್ತಡದಿಂದ ಕೆಲಸ ಮಾಡಲು ಅಸಾಧ್ಯವಾಗಿದ್ದು, ಸಮಸ್ಯೆಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಸ್ಪಂದಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಉಳ್ಳಾಲ ತಾಲ್ಲೂಕು ಸಮಿತಿ ಅಧ್ಯಕ್ಷ ತೌಫಿಕ್ ಹೇಳಿದರು.
ಉಳ್ಳಾಲ ಕಂದಾಯ ಇಲಾಖೆಯ ಮುಂಭಾಗ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಆಶ್ರಯದಲ್ಲಿ ಉಳ್ಳಾಲ ತಹಶೀಲ್ದಾರ್ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಆಡಳಿತ ಲೆಕ್ಕಪರಿಶೋಧಕ ನಿಂಗಪ್ಪ ಜಜ್ಜೂರಿ ಮಾತನಾಡಿ, ತಂತ್ರಾಂಶಗಳ ಬಳಕೆಯ ಬಳಿಕ ಅದನ್ನು ನಿರ್ವಹಿಸಲು ಸಾಧ್ಯವಿಲ್ಲದ್ದಂತಾಗಿದೆ ಎಂದರು.