ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ತನ ಸಹೋದರನ ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಯು.ಟಿ ಖಾದರ್

ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ಸಹೋದರ ಶರತ್ ಕಾಜವ (55) ಅಕಾಲಿಕವಾಗಿ ಭಾನುವಾರ ಮರಣ
Published 4 ಜೂನ್ 2023, 14:01 IST
Last Updated 4 ಜೂನ್ 2023, 14:01 IST
ಅಕ್ಷರ ಗಾತ್ರ

ಉಳ್ಳಾಲ(ದಕ್ಷಿಣ ಕನ್ನಡ): ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ಸಹೋದರ ಶರತ್ ಕಾಜವ (55) ಅಕಾಲಿಕವಾಗಿ ಭಾನುವಾರ ಮರಣಹೊಂದಿದ್ದು ಅವರ ಅಂತಿಮಯಾತ್ರೆಯಲ್ಲಿ ಭಾಗವಹಿಸಿದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಶವಯಾತ್ರೆ ವೇಳೆ ಹೆಗಲುಕೊಟ್ಟು ಮಾನವೀಯತೆ ಮೆರೆದರು.

ಮುಡಿಪು ಮಿತ್ತಕೋಡಿ ನಿವಾಸಿ ಶರತ್ ಕಾಜವ ಇಂದು ನಸುಕಿನ ಜಾವ ಹೃದಯಾಘಾತಕ್ಕೊಳಗಾಗಿ ಅಕಾಲಿಕವಾಗಿ ಕೊನೆಯುಸಿರೆಳೆದಿದ್ದರು. ಮಾಹಿತಿ ತಿಳಿಯುತ್ತಿದ್ದಂತೆಯೇ ಯು.ಟಿ ಖಾದರ್ ಅವರು ಪೂರ್ವನಿಗದಿ ಪಡಿಸಿದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ತಕ್ಷಣವೇ ಮಿತ್ತಕೋಡಿಯ ಕಾಜವ ಅವರ‌ ಮನೆಗೆ ಧಾವಿಸಿದರು. ಸಂಬಂಧಿಕರಲ್ಲಿ ಧೈರ್ಯ ತುಂಬಿದ ಅವರು ನಂತರ ನಡೆದ ಅಂತಿಮಯಾತ್ರೆಗೆ ಹೆಗಲುಕೊಟ್ಟರು.

ನರಿಂಗಾನ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಸಹೋದರರಾಗಿದ್ದ ಶರತ್ ಕಾಜಾವ, ಪ್ರಗತಿಪರ ಕೃಷಿಕ ವೆಂಕಪ್ಪ ಕಾಜವರ ಪುತ್ರ. ಕಂಬಳ ಸಮಿತಿಯ ಸದಸ್ಯರೂ ಆಗಿದ್ದ ಅವರು ಮಿತ್ತಕೋಡಿ

ಕಂಬಳದ ಯಶಸ್ಸಿಗಾಗಿ ಹಲವು ವಾರಗಳ ಕಾಲ ದುಡಿದಿದ್ದರು.ತಾಯಿಯ ಅನಾರೋಗ್ಯವಿದ್ದಾಗಲೂ ಕಂಬಳದ ಕರೆಯಲ್ಲಿ ಆಗಬೇಕಾದ ವ್ಯವಸ್ಥೆ ಬಗ್ಗೆ ತುಂಬ ಕಾಳಜಿ ವಹಿಸಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಅವರಿಗೆ ಪತ್ನಿ, ಪುತ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT