ಬಂಟ್ವಾಳ: ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಸದಸ್ಯರಿಗೆ ತ್ವರಿತ ಸೇವೆ ಮತ್ತು ಗರಿಷ್ಠ ಲಾಭಾಂಶ ನೀಡುವ ಮೂಲಕ ಗುರುತಿಸಿಕೊಂಡ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರ ಸಂಘದ ವತಿಯಿಂದ ವಾಮಂಜೂರು ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಏ.30ರಂದು 16ನೇ ವಾಮಂಜೂರು ಶಾಖೆ ಉದ್ಘಾಟನೆಗೊಳ್ಳಲಿದೆ.

ಮುಖಂಡ ಬಿ.ರಮಾನಾಥ ರೈ ಅವರು ಅಂದು ಬೆಳಿಗ್ಗೆ 10.30ಕ್ಕೆ ಶಾಖೆ ಉದ್ಘಾಟಿಸುವರು. ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಭದ್ರತಾ ಕೊಠಡಿ ಉದ್ಘಾಟಿಸುವರು. ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್., ವಾಮಂಜೂರು ಸೇಂಟ್ ಜೋಸೆಫ್ ಚರ್ಚ್ನ ಧರ್ಮಗುರು ಜೇಮ್ಸ್ ಡಿಸೋಜ, ಇಸ್ಲಾಹುಲ್ ಇಸ್ಲಾಂ ಮದರಸ ಮತ್ತು ಜುಮಾ ಮಸೀದಿ ಖತೀಬ ಅಬ್ದುಲ್ ರಹಿಮಾನ್ ಕೋಯ, ಗುರುಪುರ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಓಂ ಪ್ರಕಾಶ್ ಶೆಟ್ಟಿ, ಮುಖಂಡ ಜಯಪ್ರಕಾಶ್, ಹೇಮಲತಾ ರಘು ಸಾಲ್ಯಾನ್, ರಾಜ್ಕುಮಾರ್ ಶೆಟ್ಟಿ ತಿರುವೈಲುಗುತ್ತು, ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮೂಡುಶೆಡ್ಡೆ ಗ್ರಾ.ಪಂ. ಅಧ್ಯಕ್ಷ ಅನಿಲ್ ಭಾಗವಹಿಸುವರು.

ಮೂರ್ತೆದಾರಿಕೆ ಕುಲ ಕಸುಬುದಾರರ ಜೀವನ ಮಟ್ಟ ಸುಧಾರಣೆಗಾಗಿ 1991ರಲ್ಲಿ ಸಜಿಪಮೂಡ ಸುಭಾಶ್ ನಗರ ಎಂಬಲ್ಲಿ ಆರಂಭಗೊಂಡ ಸಂಘವು 2005ರ ನ.18ರಂದು ಬೊಳ್ಳಾಯಿಯಲ್ಲಿ ಬ್ಯಾಂಕಿಂಗ್ ವ್ಯವಹಾರ ಆರಂಭಿಸಿತು. ಇದೀಗ ಬೋಳಂತೂರು, ಚೇಳೂರು, ಪಜೀರು, ವಾಮದಪದವು, ಸಿದ್ಧಕಟ್ಟೆ, ಅಣ್ಣಳಿಕೆ, ಮಾರ್ನಬೈಲು, ಮಣಿಹಳ್ಳ, ಕಾವಳಮೂಡೂರು ಎನ್.ಸಿ.ರೋಡು, ಸಾಲೆತ್ತೂರು, ಕಂಬಳಬೆಟ್ಟು, ಪುಣಚ, ಬಿ.ಸಿ.ರೋಡು, ವೇಣೂರು ಶಾಖೆಗಳು ಇವೆ.

ಸಂಘದ ಸಿಇಒ ಮಮತಾ ಜಿ.ಸಹಿತ ಎಲ್ಲ ಶಾಖೆಗಳಲ್ಲಿ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಘದ ಉಪಾಧ್ಯಕ್ಷ ವಿಠಲ ಬೆಳ್ಚಡ ಚೇಳೂರು, ನಿರ್ದೇಶಕರಾಗಿ ಸುಂದರ ಪೂಜಾರಿ ಬೀಡಿನಪಾಲು, ರಮೇಶ್ ಅನ್ನಪ್ಪಾಡಿ, ಪೂಜಾರಿ ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಾಲೆ, ಸುಜಾತಾ, ವಾಣಿ ವಸಂತ, ಅರುಣ್ ಕುಮಾರ್ ಎಂ., ಆಶಿಶ್ ಪೂಜಾರಿ, ಚಿದಾನಂದ ಎಂ., ಸಿಬ್ಬಂದಿ ಸಂಘದ ಬೆಳವಣಿಗೆಯಲ್ಲಿ ಕೈ ಜೋಡಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಮೆಲ್ಕಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.