ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ವರ್ಚುವಲ್ ಯೋಗಾಭ್ಯಾಸ, ಉಪನ್ಯಾಸ ನಾಳೆ

Last Updated 20 ಜೂನ್ 2021, 3:03 IST
ಅಕ್ಷರ ಗಾತ್ರ

ಮಂಗಳೂರು: ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಯೇನೆಪೋಯ (ಪರಿಗಣಿತ ವಿಶ್ವವಿದ್ಯಾಲಯ) ಹಾಗೂ ಆವಿಷ್ಕಾರ ಯೋಗ ಸಹಯೋಗದಲ್ಲಿ ಜೂನ್ 21ರಂದು ಬೆಳಿಗ್ಗೆ 6.30 ರಿಂದ 7.30ವರೆಗೆ ಯೋಗದಿನದ ಶಿಷ್ಟಾಚಾರದ ಯೋಗಾಭ್ಯಾಸವು ಯೂಟ್ಯೂಬ್ ಲಿಂಕ್ https://youtu.be/-oW5zomdYCA ಮೂಲಕ ನಡೆಯಲಿದೆ. ಯೋಗ ಗುರು ಕುಶಾಲಪ್ಪ ಗೌಡ ಯೋಗಾಭ್ಯಾಸದ ತರಬೇತಿ ನೀಡುವರು.

ಉಪನ್ಯಾಸ: ಯೇನೆಪೋಯ ವಿಶ್ವವಿದ್ಯಾಲಯದ ವತಿಯಿಂದ ಬೆಳಿಗ್ಗೆ 10 ಗಂಟೆಗೆ ಯೋಗದಿನದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಕೃಷ್ಣ ಭಟ್ ಉಪನ್ಯಾಸ ನೀಡುವರು. ವಿಶ್ರಾಂತ ಪಕುಲಪತಿ ಡಾ.ಎಸ್.ಚಂದ್ರಶೇಖರ ಶೆಟ್ಟಿ ಗೌರವ ಅತಿಥಿಯಾಗಿರುವರು. ಯೇನೆಪೋಯ ಕುಲಪತಿ ಡಾ.ಎಂ. ವಿಜಯ ಕುಮಾರ್ ಅಧ್ಯಕ್ಷತೆ ವಹಿಸುವರು.

ಗೂಗಲ್ ಮೀಟ್‍ https://meet.google.com/ zuh-eeyq-sxs, ಯುಟ್ಯೂಬ್‌ https://youtu.be/qCPByvQki-Q ಯೇನೆಪೋಯ ಯೂಟ್ಯೂಬ್‍ನಲ್ಲಿ ನೇರಪ್ರಸಾರವಾಗಲಿದೆ. ಮಾಹಿತಿಗೆ ತರಬೇತುದಾರ ಕುಶಾಲಪ್ಪ ಜಿ.ಎನ್. ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT