ವಿಟ್ಲ: ಬೀಡಿ ಕಾರ್ಮಿಕರಿಗೆ 2018ರಿಂದ 2024ರವರೆಗೆ ಬಾಕಿ ಇರುವ ಕನಿಷ್ಠ ವೇತನಮ, ಕನಿಷ್ಠ ಕೂಲಿ ಮತ್ತು ತುಟ್ಟಿಭತ್ತೆ ನೀಡುವಂತೆ ಆಗ್ರಹಿಸಿ ವಿಟ್ಲ ನೆತ್ರಕೆರೆ ಗಣೇಶ್ ಬೀಡಿ-ಎಸ್ಕೆಎಚ್ಐ ಸಂಸ್ಥೆಯ ಮುಂಭಾಗ ದ.ಕ ಜಿಲ್ಲಾ ಬೀಡಿ ಮತ್ತು ಜನರಲ್ ಲೇಬರ್ ಯೂನಿಯನ್ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಹಕ್ಕೊತ್ತಾಯ ಚಳವಳಿ ನಡೆಸಿದರು.

ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಸೀತಾರಾಮ ಬೇರಿಂಜ ಮಾತನಾಡಿ, ಬೀಡಿ ಮಾಲೀಕರು ಬಾಕಿ ಇರಿಸಿದ 6 ವರ್ಷಗಳ ಕನಿಷ್ಠ ವೇತನವನ್ನು ಜೂನ್ ತಿಂಗಳಿನಿಂದಲೇ ಪಾವತಿಸುತ್ತೇವೆಂದು ಒಪ್ಪಿ ಇದೀಗ 5 ತಿಂಗಳು ಕಳೆದರೂ ಸಂಬಂಧಿಸಿದ ಮೊತ್ತವನ್ನು ಪಾವತಿಸುತ್ತಿಲ್ಲ ಎಂದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಎಸ್ಕೆ ಬೀಡಿ ವರ್ಕರ್ಸ್ ಫೆಡರೇಷನ್ ಉಪಾಧ್ಯಕ್ಷ ಬಿ.ಎಂ. ಹಸೈನಾರ್, ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಷಸ್ ಕಾರ್ಯದರ್ಶಿ ಸುರೇಶ್ ಕುಮಾರ್ ಮಾತನಾಡಿದರು.

ಪ್ರತಿಭಟನೆಗೂ ಮುನ್ನ ಕಾರ್ಯಕರ್ತರು ವಿಟ್ಲ ನೇತ್ರಕೆರೆ ಗಣೇಶ್ ಬೀಡಿ ಡಿಪೊದವರೆಗೆ ಮೆರವಣಿಗೆ ನಡೆಸಿದರು. ನೇತೃತ್ವವನ್ನು ಎಐಟಿಯುಸಿ ಮುಂದಾಳು ರಾಮ ಮುಗೇರ, ಒ.ಕೃಷ್ಣ, ಚಂದ್ರಶೇಖರ, ಆನಂದ, ನಯನ, ತೆರೆಸಾ, ರವೀಂದ್ರ, ಸೀತಾರಾಮ ಕನ್ಯಾನ ವಹಿಸಿದ್ದರು.

ಎಐಟಿಯುಸಿ ಮುಖಂಡ ಸೀತರಾಮ ಕಡಂಬು ವಂದಿಸಿದರು.