ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ‘ವಿವಾಹ ಸನ್ಮಾನಂ’ಗೆ ಅರ್ಜಿ ಆಹ್ವಾನ

Published 18 ಡಿಸೆಂಬರ್ 2023, 13:32 IST
Last Updated 18 ಡಿಸೆಂಬರ್ 2023, 13:32 IST
ಅಕ್ಷರ ಗಾತ್ರ

ಮಂಗಳೂರು: ಮುತ್ತೂಟ್‌ ಫೈನಾನ್ಸ್‌ ಸಂಸ್ಥೆಯು ತನ್ನ ಸಿಎಸ್‌ಆರ್‌ ಯೋಜನೆಯಡಿ ನೀಡುವ ‘ವಿವಾಹ ಸನ್ಮಾನಂ’ ಆರ್ಥಿಕ ನೆರವಿಗಾಗಿ ಅರ್ಜಿ ಆಹ್ವಾನಿಸಿದೆ.

ಪತಿಯನ್ನು ಕಳೆದುಕೊಂಡಿರುವ ಮಹಿಳೆಯರಿಗೆ ತಮ್ಮ ಪುತ್ರಿಯ ವಿವಾಹ ನೆರವೇರಿಸಲು ಈ ಯೋಜನೆಯಡಿ ಗರಿಷ್ಠ ₹50,000 ನೆರವು ನೀಡಲಾಗುತ್ತದೆ. ಬೆಂಗಳೂರು, ಹೈದರಾಬಾದ್‌, ಮದುರೈ, ಮಂಗಳೂರು, ಮುಂಬೈ, ಕೋಲ್ಕತ್ತ ಹಾಗೂ ದೆಹಲಿಯ ಗರಿಷ್ಠ 80 ಮಹಿಳೆಯರಿಗೆ ಈ ನೆರವು ನೀಡಲಾಗುವುದು.

ಯೋಜನೆಯ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ಸಿಎಸ್‌ಆರ್‌ ಮುಖ್ಯಸ್ಥ ಬಾಬು ಜಾನ್‌ ಮಲಯಿಲ್‌, ‘ಈ ಯೋಜನೆಯಡಿ ಸಂಸ್ಥೆ ಈವರೆಗೆ ₹15 ಕೋಟಿಯನ್ನು ನೆರವಿನ ರೂಪದಲ್ಲಿ ನೀಡಿದೆ. ಈ ಬಾರಿ 2024ರ ಜನವರಿ 1ರಿಂದ ಮಾರ್ಚ್‌ 31ರೊಳಗಿನ ಅವಧಿಯಲ್ಲಿ ನಡೆಯುವ ಮದುವೆಗಳಿಗೆ ನೆರವು ನೀಡಲಾಗುವುದು. ತಿಂಗಳ ವರಮಾನ ₹10,000 ಮೀರದಿರುವ ವಿಧವೆಯರು ನೆರವಿಗೆ ಅರ್ಜಿ ಸಲ್ಲಿಸಬಹುದು’ ಎಂದಿದ್ದಾರೆ.

ನೆರವು ಪಡೆಯಲು ಬಯಸುವ ಮಹಿಳೆಯು (ವಧುವಿನ ತಾಯಿ) ಖಾಲಿ ಹಾಳೆಯಲ್ಲಿ ಅರ್ಜಿಯನ್ನು ಬರೆದು ಸಲ್ಲಿಸಬೇಕು. ಅರ್ಜಿಯ ಜೊತೆಗೆ ಸ್ಥಳೀಯ ಪಾಲಿಕೆ ಸದಸ್ಯ, ಪಂಚಾಯಿತಿ ಸದಸ್ಯ ಅಥವಾ ಶಾಸಕರ ಶಿಫಾರಸು ಪತ್ರ, ಮದುವೆಯ ದಿನಾಂಕ ಮತ್ತು ಸ್ಥಳವನ್ನು ನಮೂದಿಸುವ ಆಮಂತ್ರಣ ಪತ್ರದ ಪ್ರತಿ, ರೇಶನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಪ್ರತಿ, ಆದಾಯ ಪ್ರಮಾಣಪತ್ರ, ಪತಿ ನಿಧನರಾಗಿರುವುದನ್ನು ದೃಢಪಡಿಸುವ ಮರಣ ಪ್ರಮಾಣಪತ್ರ ಸಲ್ಲಿಸಬೇಕು.

ಅರ್ಜಿಯು ಡಿ.25ರಂದು ಸಂಜೆ 5.30ರೊಳಗೆ, ಪ್ರಸಾದ್‌ ಕುಮಾರ್‌, ವ್ಯವಸ್ಥಾಪಕರು– ಸಿಎಸ್‌ಆರ್‌, ಮಂಗಳೂರು ವಲಯ, ಮುತ್ತೂಟ್‌ ಫೈನಾನ್ಸ್‌ ಲಿ. ವಲಯ ಕಚೇರಿ, ಎರಡನೇ ಮಹಡಿ, ಸಿಟಿ ಟ್ರೇಡ್‌ ಸೆಂಟರ್‌, ಸಿಟಿ ಆಸ್ಪತ್ರೆ ಎದುರು, ಕದ್ರಿ, ಮಂಗಳೂರು 575003 ಇಲ್ಲಿಗೆ ತಲುಪುವಂತೆ ಕಳುಹಿಸಬಹುದು.

ಹೆಚ್ಚಿನ ಮಾಹಿತಿಗೆ ಮೊ. 9036439056 ಅಥವಾ 8129487359 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT