ಮಂಗಳವಾರ, ಜೂನ್ 28, 2022
25 °C

ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ ವೃದ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಸ್ತೆಗೆ ಕಾಂಕ್ರಿಟೀಕರಣ ಮಾಡುವ ವೇಳೆ ವೃದ್ಧೆಯೊಬ್ಬರು ನಡುರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ ಘಟನೆ ಮಣ್ಣಗುಡ್ಡ ಗುರ್ಜಿ ಬಳಿ ಮಂಗಳವಾರ ನಡೆದಿದೆ.

ವಾರ್ಡ್‌ ನಂ.28ರಲ್ಲಿ ಮೂರು ಮನೆಗಳನ್ನು ಸಂಪರ್ಕಿಸುವ ಓಣಿ ರಸ್ತೆಗೆ ಪಾಲಿಕೆ ವತಿಯಿಂದ ಕಾಂಕ್ರೀಟೀಕರಣ ನಡೆಯುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯ ವೈಲೇಟ್‌ ಪಿರೇರಾ ಅವರು, ‘ಈ ಖಾಸಗಿ ಜಾಗ ನನಗೆ ಸೇರಿದ್ದು, ಇಲ್ಲಿ ಬಲವಂತವಾಗಿ ಕಾಂಕ್ರಿಟೀಕರಣ ಮಾಡಲಾಗುತ್ತಿದೆ’ ಎಂದು ಆರೋಪಿಸಿ ಏಕಾಂಗಿಯಾಗಿ ಪ್ರತಿಭಟಿಸಿದರು.

ಸ್ಥಳಕ್ಕೆ ಬಂದ ಅಧಿಕಾರಿಗಳಲ್ಲಿ ‘ಕಾಮಗಾರಿ ಆದೇಶ ಪತ್ರ ತನ್ನಿ’ ಎಂದು ವೃದ್ಧೆ ಒತ್ತಾಯಿಸಿದರು. ‘ಈ ಕಾಮಗಾರಿಯಿಂದ ನನ್ನ ಮನೆಯಂಗಳಕ್ಕೆ ನೀರು ನುಗ್ಗುತ್ತಿದೆ’ ಎಂದು ಆರೋಪಿಸಿದರು.

ಕಾರ್ಪೊರೇಟರ್‌ ಸಂಧ್ಯಾ ಮೋಹನ್‌ ಆಚಾರ್‌ ವೃದ್ಧೆಯನ್ನು ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ವೃದ್ಧೆಯನ್ನು ಎಷ್ಟೇ ಮನವೊಲಿಸಿದರೂ ಮಲಗಿದ್ದಲ್ಲಿಂದ ಕದಲಲಿಲ್ಲ. ಕೊನೆಗೆ ಪ್ರತಿರೋಧದ ಮಧ್ಯೆಯೂ ಪೊಲೀಸರು ಆಕೆಯನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದರು. ವೃದ್ಧೆಯನ್ನು ಬಲವಂತದಿಂದ ಎತ್ತುವಾಗ ಒಂದಿಬ್ಬರ ಕೈಗೆ ಆಕೆ ಕಚ್ಚಿದ ಪ್ರಸಂಗವೂ ನಡೆಯಿತು. 

 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು