ಸೋಮವಾರ, ಸೆಪ್ಟೆಂಬರ್ 20, 2021
27 °C
ಯಕ್ಷಗಾನ ಪಾತ್ರಧಾರಿ ಅಮ್ಮುಂಜೆ ಮೋಹನ್ ಕುಮಾರ್

ಮೂಡುಬಿದಿರೆ: ಕುಸಿದು ಬಿದ್ದ ‘ಅರ್ಜುನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: ಇಲ್ಲಿಗೆ ಸಮೀಪದ ಅಲಂಗಾರು ಮಹಾಲಿಂಗೇಶ್ವರ ದೇವಾಲಯದಲ್ಲಿ ಸೋಮವಾರ ರಾತ್ರಿ ನಡೆದ ಕರ್ಣಾರ್ಜುನ ಯಕ್ಷಗಾನದ ವೇದಿಕೆಯಲ್ಲಿ ಅರ್ಜುನ ಪಾತ್ರಧಾರಿ ಅಮ್ಮುಂಜೆ ಮೋಹನ್ ಕುಮಾರ್ ಕುಸಿದು ಬಿದ್ದಿದ್ದಾರೆ.

ತಲೆ ಸುತ್ತು ಬಂದು ಬಿದ್ದ ಅವರು, ಬಳಿಕ ಚೇತರಿಸಿಕೊಂಡು ರಂಗ ಪ್ರದರ್ಶನ ನೀಡಿದ್ದಾರೆ. ಅಮ್ಮುಂಜೆ ಮೋಹನ್ ಅವರು ಸುಪ್ರಸಿದ್ಧ ಪುಂಡು ವೇಷಧಾರಿಯಾಗಿದ್ದು, ಎರಡೂವರೆ ದಶಕಗಳಿಂದ ಯಕ್ಷಗಾನದಲ್ಲಿ ಇದ್ದಾರೆ.

ಈ ಯಕ್ಷಗಾನವು ಫೇಸ್‌ಬುಕ್‌ನಲ್ಲಿ ಲೈವ್ ಆಗುತ್ತಿದ್ದು, ಘಟನೆಯನ್ನು ಕಂಡ ಅಭಿಮಾನಿಗಳು ಬೇಗನೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.