ಹರಿಹರ: ಪೌತಿ ಖಾತೆ ಆಂದೋಲನದಡಿ ತಾಲ್ಲೂಕಿನಲ್ಲಿ 10,152 ಪ್ರಕರಣಗಳನ್ನು ಪೌತಿ ಖಾತೆ ಬದಲಾವಣೆಗಾಗಿ ಗುರುತಿಸಲಾಗಿದೆ ಎಂದು ತಹಶೀಲ್ದಾರ್ ಗುರು ಬಸವರಾಜ್ ತಿಳಿಸಿದರು.

ತಾಲ್ಲೂಕಿನ 86 ಗ್ರಾಮಗಳ 1,093 ಸರ್ವೆ ನಂಬರ್ಗಳ ಪೈಕಿ 10,152 ಪ್ರಕರಣಗಳಲ್ಲಿ ಮೃತಪಟ್ಟವರ ಹೆಸರಿನಲ್ಲೇ ದಾಖಲೆಗಳಿದ್ದು, ಅವುಗಳ ಖಾತೆಯನ್ನು ವಾರಸುದಾರರ ಹೆಸರಿಗೆ ಬದಲಾಯಿಸಬೇಕಿದೆ. ಸಂಬಂಧಪಟ್ಟ ರೈತ ಕುಟುಂಬದವರು ಅಗತ್ಯ ದಾಖಲೆಗಳನ್ನು ಗ್ರಾಮ ಆಡಳಿತಾಧಿಕಾರಿಗೆ ಒದಗಿಸಬೇಕು ಎಂದು ತಾಲ್ಲೂಕು ಕಚೇರಿಯಲ್ಲಿ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಆರ್ಟಿಸಿ (ಪಹಣಿ)– ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಶೇ 87.32ರಷ್ಟು ಪ್ರಗತಿ ಸಾಧಿಸಲಾಗಿದೆ. ತಾಲ್ಲೂಕಿನಲ್ಲಿ 1,29,595 ಪ್ರಕರಣಗಳ ಪೈಕಿ 88,889ಕ್ಕೆ ಆಧಾರ್ ಸೀಡಿಂಗ್ ಆಗಿದೆ ಎಂದರು.

ಕಂದಾಯ ಗ್ರಾಮ: ದಾಖಲೆ ರಹಿತ 6 ಜನವಸತಿ ಗ್ರಾಮಗಳನ್ನು ಕಂದಾಯ ಅಥವಾ ಉಪ ಗ್ರಾಮಗಳನ್ನಾಗಿ ಗುರುತಿಸಲಾಗಿದ್ದು, ಈ ಪೈಕಿ 2 ಜನವಸತಿ ಗ್ರಾಮಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲಾಗಿದೆ. 95 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದ ಪ್ರಕರಣಗಳ ಪ್ರಕ್ರಿಯೆ ನಡೆಯುತ್ತಿದ್ದು, ನಿವಾಸಿಗಳು ಇ-ಸ್ವತ್ತು ಪಡೆಯಲು ಅನುಕೂಲವಾಗಲಿದೆ ಎಂದರು.

ಭೂ ಸುರಕ್ಷಾ ಯೋಜನೆ: ಕಂದಾಯ ದಾಖಲೆಗಳನ್ನು ಭೂ ಸುರಕ್ಷಾ ಯೋಜನೆಯಡಿ ಗಣಕೀಕರಣಗೊಳಿಸುವ ಪ್ರಕ್ರಿಯೆ ಕೈಗೊಂಡಿದ್ದು 81,694 ದಾಖಲೆಗಳ ಪೈಕಿ ಈವರೆಗೆ 16,915 ದಾಖಲೆಗಳ 13,72,155 ಪುಟಗಳ ಗಣಕೀಕರಣ ಪೂರ್ಣಗೊಂಡಿದೆ. ಈ ಪೈಕಿ 4,250 ಪುಟಗಳ ಡಿಜಿಟಲ್ ಪ್ರತಿಗಳನ್ನು ಸಾರ್ವಜನಿಕರಿಗೆ ಆನ್ಲೈನ್ ಮೂಲಕ ವಿತರಿಸಲಾಗಿದೆ ಎಂದರು.

ದರಖಾಸ್ತು ಪೋಡಿ ದುರಸ್ತಿ: ಭೂ ಮಂಜೂರಾತಿಯಾದ ಸರ್ಕಾರಿ ಸ.ನಂ. ಜಮೀನುಗಳಲ್ಲಿ ದರಖಾಸ್ತು ಪೋಡಿ ವಿಷಯವಾಗಿ 37 ಸ.ನಂ.ಗಳಲ್ಲಿ 985 ಫಲಾನುಭವಿಗಳನ್ನು ಗುರುತಿಸಲಾಗಿದೆ. ಈ ಪೈಕಿ 359 ಫಲಾನುಭವಿಗಳ 480 ಎಕರೆ ವಿಸ್ತೀರ್ಣದ ಜಮೀನುಗಳ ಫಲಾನುಭವಿಗಳಿಗೆ ಅನುಬಂಧ-1 ತಯಾರಿಸಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮುಂದಿನ ಕ್ರಮಕ್ಕೆ ಕಳುಹಿಸಿದೆ. ಈ ಪೈಕಿ 175 ಫಲಾನುಭವಿಗಳಿಗೆ ಪೋಡಿ ದುರಸ್ತಿ ಮಾಡಿ ಹೊಸ ಸ.ನಂ.ನೊಂದಿಗೆ ಪಹಣಿ ಸೃಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗಣಕೀಕರಣ ಪ್ರಕ್ರಿಯೆ ಪೂರ್ಣವಾದ ಬಳಿಕ ಖಾತೆದಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ತಮ್ಮ ಆಸ್ತಿ ದಾಖಲೆಗಳನ್ನು ಪಡೆಯಲು ಭೂ ಮಾಪನ ಹಾಗೂ ಕಂದಾಯ ಇಲಾಖೆ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ
ಗುರು ಬಸವರಾಜ್ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.