ದಾವಣಗೆರೆ: ಜಿಲ್ಲೆಯಲ್ಲಿ 130 ಮಂದಿಗೆ ಕೊರೊನಾ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ. 171 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

16 ವೃದ್ಧರು, 8 ವೃದ್ಧೆಯರು, ಮೂವರು ಬಾಲಕರು, ನಾಲ್ವರು ಬಾಲಕಿಯರಿಗೂ ಕೊರೊನಾ ಬಂದಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 63 ಮಂದಿಗೆ ಸೋಂಕು ತಗುಲಿದೆ. ಕುರುಡಿ, ಶಿರಮಗೊಂಡನಹಳ್ಳಿ, ರಾಮಗೊಂಡನಹಳ್ಳಿ, ಮಾಗನೂರು, ನರಗನಹಳ್ಳಿ, ನಲ್ಕುಂದ, ಆನಗೋಡು, ಹಿರೆತೋಗಲೇರಿ, ಮಾಯಕೊಂಡ, ಹುಚ್ಚವನಹಳ್ಳಿ, ಬುಳ್ಳಾಪುರ ಹೀಗೆ 11 ಮಂದಿ ಗ್ರಾಮೀಣ ಭಾಗದವರು. ಉಳಿದ 52 ಮಂದಿ ಮಹಾನಗರ ಪಾಲಿಕೆ ವ್ಯಾಪ್ತಿಯವರಾಗಿದ್ದಾರೆ.

ಚಿಗಟೇರಿ ಆಸ್ಪತ್ರೆಯ ನಾಲ್ವರು, ಬಾಪೂಜಿ ಆಸ್ಪತ್ರೆಯ ಇಬ್ಬರು, ಎಸ್ಎಸ್ಐಎಂಎಸ್ ಆಸ್ಪತ್ರೆಯ ಇಬ್ಬರು, ಪೊಲೀಸ್ ಕ್ವಾರ್ಟರ್ಸ್ನ ಇಬ್ಬರು, ಬಾಪೂಜಿ ಕೊ ಆಪರೇಟಿವ್ ಸೊಸೈಟಿಯ ಒಬ್ಬ ಸಿಬ್ಬಂದಿಗೆ ಕೊರೊನಾ ಬಂದಿದೆ.

ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 42, ಹರಿಹರ ತಾಲ್ಲೂಕಿನಲ್ಲಿ 22, ಜಗಳೂರು ತಾಲ್ಲೂಕಿನಲ್ಲಿ ಇಬ್ಬರು ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿ ಒಬ್ಬರು ಸೋಂಕಿಗೆ ಒಳಗಾಗಿದ್ದಾರೆ.

ಭಾನುವಾರ ಗುಣಮುಖರಾಗಿ ಬಿಡುಗಡೆಗೊಂಡವರಲ್ಲಿ 23 ವೃದ್ಧರು, 13 ವೃದ್ಧೆಯರು, ನಾಲ್ವರು ಬಾಲಕರು, ಐವರು ಬಾಲಕಿಯರು ಸೇರಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 14,536 ಮಂದಿಗೆ ಕೊರೊನಾ ಬಂದಿದೆ. 11,502 ಮಂದಿ ಗುಣಮುಖರಾಗಿದ್ದಾರೆ. 231 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.