ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಮನೂರು ಜನುಮದಿನಕ್ಕೆ ಗಣ್ಯರ ಶುಭಹಾರೈಕೆ

ಗಿಡ ನೆಡುವುದು, ಹಣ್ನುಹಂಪಲು ವಿತರಣೆ ಸಹಿತ ಹಲವು ಕಾರ್ಯಕ್ರಮಗಳು
Last Updated 16 ಜೂನ್ 2020, 17:53 IST
ಅಕ್ಷರ ಗಾತ್ರ

ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ 90ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಸಚಿವ ಜಗದೀಶ ಶೆಟ್ಟರ್ ದಂಪತಿ ಸಹಿತ ನೂರಾರು ಮಂದಿ ಬಂದು ಶುಭ ಕೋರಿದ್ದಾರೆ. ಗಿಡ ನೆಡುವುದು, ಹಣ್ಣು ಹಂಪಲು ವಿತರಣೆ ಸಹಿತ ವಿವಿಧ ಕಾರ್ಯಕ್ರಮಗಳನ್ನು ಅವರ ಅಭಿಮಾನಿಗಳು ಹಮ್ಮಿಕೊಂಡರು.

ಶಿವಪಾರ್ವತಿ ನಿವಾಸದಲ್ಲಿ ಮಕ್ಕಳಾದ ಮಂಜುಳಾ, ಶೈಲಜಾ, ಸುಧಾ, ಮೀನಾ, ಎಸ್.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್, ಎಸ್.ಎಸ್.ಮಲ್ಲಿಕಾರ್ಜುನ್, ಡಾ. ಎಸ್.ಬಿ.ಮುರುಗೇಶ್ ಸೇರಿ ಕುಟುಂಬದ ಸದಸ್ಯರು ಶುಭಾಶಯ ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ, ಎಸಿ ಮಮತಾ ಹೊಸಗೌಡರ್, ತಹಶೀಲ್ದಾರ್ ಗಿರೀಶ್, ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಪಿಎಸ್‌ಐಗಳಾದ ಕಿರಣ್‌ಕುಮಾರ್, ವೀರೇಶ್, ಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಸಿ.ಜಿ.ಆಸ್ಪತ್ರೆಯ ಅಧೀಕ್ಷಕ ಡಾ. ನಾಗರಾಜ್, ನಜ್ಮಾ, ರೇಷ್ಮಾ ಹಾನಗಲ್, ದಾರುಕೇಶ್, ಕೆ.ಇಮಾಂ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಶುಭಕೋರಿದರು.

ಮಾಜಿ ಸಚಿವರಾದ ಎಚ್.ಆಂಜನೇಯ, ಪಿ.ಟಿ. ಪರಮೇಶ್ವರ ನಾಯ್ಕ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಚ್. ಓಬಳೇಶಪ್ಪ, ಕೆ.ಎಸ್.ಬಸವಂತ‍ಪ್ಪ, ಮಾಜಿ ಅಧ್ಯಕ್ಷ ಡಾ. ವೈ.ರಾಮಪ್ಪ, ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ನಿವೃತ್ತ ಪೋಲೀಸ್ ಅಧಿಕಾರಿ ರವಿನಾರಾಯಣ್, ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ಸಮಿತಿ, ಜೀಮುಲ್ ಮುಸ್ಲೀಮಿನ್ ಕಮಿಟಿಯ ಅಧ್ಯಕ್ಷ ಸಾದಿಕ್ ಪೈಲ್ವಾನ್, ಖಾಸಗಿ ಬಸ್ ಮಾಲೀಕರು, ಬ್ಯಾಂಕ್‌ಗಳ ಒಕ್ಕೂಟದ ಎನ್‌ಎಂಜೆಬಿ ಮುರುಗೇಶ್ ಒಳಿತು ಬಯಸಿದರು.

ಪಾಲಿಕೆಯ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ದೇವರಮನೆ ಶಿವಕುಮಾರ್, ಗಡಿಗುಡಾಳ್ ಮಂಜುನಾಥ್, ಕೆ.ಚಮನ್‌ಸಾಬ್, ಮೊಹ್ಮದ್ ಕಬೀರ್ ಅಲಿ, ಜಾಕೀರ್ ಅಲಿ, ಸುಧಾ ಇಟ್ಟಿಗುಡಿ ಮಂಜುನಾಥ್, ಸೈಯದ್ ಚಾರ್ಲಿ, ಪಂಡಿತ್, ಆಶಾ ಡಿ.ಎಸ್., ಬಸಾಪುರ ಕೊಟ್ರಯ್ಯ, ಜೆ.ಎನ್.ಶ್ರೀನಿವಾಸ್,ಪಾಮೇನಳ್ಳಿ ನಾಗರಾಜ್, ಸವಿತಾ ಗಣೇಶ್ ಹುಲ್ಮನಿ, ಶ್ವೇತಾ ಎಸ್., ಕಲ್ಲಳ್ಳಿ ನಾಗರಾಜ್, ಉದಯಕುಮಾರ್ ಕೇಕ್ ಕತ್ತರಿಸಿ ಶುಭ ಕೋರಿದರು.

ದಾವಣಗೆರೆ ದಕ್ಷಿಣ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಬಾಪೂಜಿ ಆಸ್ಪತ್ರೆಯ ಸಹಯೋಗದಲ್ಲಿ ಹದಡಿ ಗ್ರಾಮದಲ್ಲಿ ರಕ್ತದಾನ ಶಿಬಿರ ನಡೆಯಿತು. ಜಿ.ಸಿ.ನಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಈ ಶಿಬಿರದಲ್ಲಿ 50ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜಣ್ಣ, ಕುಕ್ಕವಾಡ ಮಲ್ಲೇಶಪ್ಪ, ಎಪಿಎಂಸಿ ಉಪಾಧ್ಯಕ್ಷ ಬೀಸಲೇರಿ ಈರಣ್ಣ, ಸದಸ್ಯ ಹಾಲಪ್ಪ, ಶಿರಮಗೊಂಡನಹಳ್ಳಿ ರುದ್ರೇಶ್, ಎಸ್.ಕೆ.ಮಾಲತೇಶ್, ರಾಘವೇಂದ್ರ, ಕೆ.ಬಿ.ಗಿರೀಶ್, ಎಸ್.ಕೆ.ಚಂದ್ರಪ್ಪ, ಮಹಾಂತೇಶ್, ಶಂಕರ ಡಿ.ಬಿ., ಲಿಂಗೇಶ್, ಮುತ್ತುರಾಜ್, ಜಾಂಬುಮುನಿ, ಬಸವರಾಜ್, ವಿರೂಪಾಕ್ಷ, ರಾಮಪ್ಪ ಇದ್ದರು.

ದಾವಣಗೆರೆ ದಕ್ಷಿಣ ಪರಿಶಿಷ್ಟ ಜಾತಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಬಾಪೂಜಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ನಲ್ಲಿ 25ಹೆಚ್ಚು ಯುವಕರು ಅಧ್ಯಕ್ಷ ನೀಲಗಿರಿ(ನಿಖಿಲ್), ಕಾರ‍್ಯದರ್ಶಿ ರಾಕೇಶ್ ನೇತೃತ್ವದಲ್ಲಿ ರಕ್ತದಾನ ಮಾಡಿದರು. ಜಾಲಿನಗರ ಕಂಟೈನ್‌ಮೆಂಟ್‌ ವಲಯದಲ್ಲಿರುವ ನಿವಾಸಿಗಳಿಗೆ ದವಸ ಧಾನ್ಯ ವಿತರಿಸಲಾಯಿತು.

ಜಯದೇವ ಜಗದ್ಗುರು ಮುರುಘಾರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 90 ಸಸಿಗಳನ್ನು ನೆಡಲಾಯಿತು. ಪ್ರಾಂಶುಪಾಲ ಡಾ. ಎಸ್.ಬಿ.ಮುರುಗೇಶ್, ಆಡಳಿತಾಧಿಕಾರಿ ಸತ್ಯನಾರಾಯಣ, ನಿರ್ದೇಶಕ ಡಾ.ಡಿ.ಎಸ್.ಕುಮಾರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT